ಸೆ. 27 ರಂದು ಜಪಾನ್ ಮಾಜಿ ಪ್ರಧಾನಿ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ: ಜಪಾನೀಸ್ ಮಾಧ್ಯಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೆಪ್ಟೆಂಬರ್ 27 ರಂದು ಟೋಕಿಯೊದಲ್ಲಿ ಏರ್ಪಡಿಸಲಾಗಿರುವ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಜುಲೈ 8 ರಂದು ಚುನಾವಣಾ ಪ್ರಚಾರ ನಡೆಸುತ್ತಿದ್ದ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಬೆ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮೋದಿ ಅವರು ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅವರು ಪ್ರಧಾನಿ ಫುಮಿಯೊ ಕಿಶಿಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಜಪಾನ್‌ ನ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದಾಗ್ಯೂ, ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ಕುರಿತು ಭಾರತ ಅಥವಾ ಜಪಾನ್‌ ಈ ವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಏತನ್ಮಧ್ಯೆ, ಜಪಾನ್ ಮತ್ತು ಭಾರತವು ಸೆಪ್ಟೆಂಬರ್ 8 ರಂದು ಟೋಕಿಯೊದಲ್ಲಿ ತಮ್ಮ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳನ್ನು ಒಳಗೊಂಡ ಎರಡನೇ ಸುತ್ತಿನ “ಟು-ಪ್ಲಸ್-ಟು” ಭದ್ರತಾ ಮಾತುಕತೆಗಳನ್ನು ನಡೆಸಲು ಯೋಜಿಸುತ್ತಿದೆ ಎಂದು ಕ್ಯೋಡೋ ವರದಿ ಹೇಳಿದೆ. ಈ ವೇಳೆ ಜಪಾನಿನ ಆತ್ಮರಕ್ಷಣಾ ಪಡೆಗಳು ಮತ್ತು ಭಾರತೀಯ ಮಿಲಿಟರಿಯನ್ನು ಒಳಗೊಂಡ ಜಂಟಿ ಸಮರಾಭ್ಯಾಸದ ಕುರಿತಾಗಿ ಚರ್ಚಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಮೋದಿ ಅವರು ಕೊನೆಯದಾಗಿ ಮೇ ತಿಂಗಳಲ್ಲಿ ಜಪಾನ್‌ಗೆ ಭೇಟಿ ನೀಡಿದ್ದರು. ಆ ಸಂದರ್ಬದಲ್ಲಿ ಅವರು ಕ್ವಾಡ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!