HEALTH TIP| ಸಂಧಿವಾತಕ್ಕೆ ಮಾತ್ರವಲ್ಲ, ಚರ್ಮದ ಸೌಂದರ್ಯಕ್ಕೂ ಅರಳೆಣ್ಣೆ ಅದ್ಭುತ ಪರಿಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರಳೆಣ್ಣೆ ಛೀ ಅಂಟು ಎನ್ನುವವರೇ ಜಾಸ್ತಿ. ಆದರೆ ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ. ಪ್ರಾಚೀನ ಕಾಲದಿಂದಲೂ ಅರಳೆಣ್ಣೆಗೆ ವ್ಯಾಪಕ ಬೇಡಿಕೆಯಿದೆ. ಪ್ರಸ್ತುತ, ಪ್ರತಿಯೊಬ್ಬರೂ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಕ್ಯಾಸ್ಟರ್ ಆಯಿಲ್ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೂದಲು ಬೆಳವಣಿಗೆ ಮತ್ತು ತಲೆಹೊಟ್ಟು ತಡೆಗಟ್ಟುವಿಕೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಈ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಕೆ ಇರುತ್ತದೆ. ಕೂದಲಿಗೆ ಎಣ್ಣೆ ಹಚ್ಚಿದ ನಂತರ ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತಲೆಬುರುಡೆಯಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು. ಇದಲ್ಲದೆ, ಕ್ಯಾಸ್ಟರ್ ಆಯಿಲ್ನ ಅನೇಕ ಪ್ರಯೋಜನಗಳಿವೆ.

1. ಕೀಲು ನೋವನ್ನು ಕಡಿಮೆ ಮಾಡಲು ಕ್ಯಾಸ್ಟರ್ ಆಯಿಲ್ ಉಪಯುಕ್ತವಾಗಿದೆ. ಕೀಲು ನೋವಿನಿಂದ ಬಳಲುತ್ತಿರುವವರು ಕ್ಯಾಸ್ಟರ್ ಆಯಿಲ್ ನಿಂದ ಮಸಾಜ್ ಮಾಡಬೇಕು. ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ನೋವಿನ ಜಾಗದಲ್ಲಿ ಕಟ್ಟಿ ಒಂದು ಗಂಟೆ ಇಟ್ಟು ನಂತರ ಬಿಸಿ ನೀರನ್ನು ಆ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ನೋವು ಮಾಯವಾಗುತ್ತದೆ.

2. ದಿನವೂ ಚಿಕ್ಕ ಮಕ್ಕಳ ತಲೆಗೆ ಅರಳೆ ಎಣ್ಣೆಯನ್ನು ಹಚ್ಚುವುದರಿಂದ ಮಕ್ಕಳ ಕೂದಲು ಆರೋಗ್ಯವಾಗಿರುತ್ತದೆ. ಉಗುರುಗಳ ಮೇಲೆ ಒಂದು ಅಥವಾ ಎರಡು ಹನಿ ಕ್ಯಾಸ್ಟರ್ ಆಯಿಲ್ ಅನ್ನು ಹಚ್ಚುವುದರಿಂದ ಉಗುರುಗಳು ಬಲಗೊಳ್ಳುತ್ತವೆ ಮತ್ತು ಉಗುರುಗಳು ಹೊಳೆಯುವ ಮತ್ತು ಸುಂದರವಾಗಿ ಕಾಣುತ್ತವೆ.

3. ಪಾತ್ರೆ ತೊಳೆಯುವುದರಿಂದ ಕೈ ಒಣಗಿರುವ ಹೆಂಗಸರು ಕೈಗಳಿಗೆ ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದ ಕೈ ಮೃದುವಾಗುತ್ತದೆ.

4. ಅಡಿಭಾಗ ಬಿರುಕು ಬಿಟ್ಟಿರುವವರು ದಿನಾಲೂ ಪಾದಗಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಒಡೆದ ಅಡಿಭಾಗದಿಂದ ಮುಕ್ತಿ ಪಡೆಯಬಹುದು ಮತ್ತು ಪಾದಗಳು ಮೃದುವಾಗಿರಬಹುದು.

5. ಕ್ಯಾಸ್ಟರ್ ಆಯಿಲ್ ಮತ್ತು ಆಲಿವ್ ಎಣ್ಣೆ ಎರಡನ್ನೂ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚುವುದರಿಂದ ಹುಬ್ಬುಗಳು ವೇಗವಾಗಿ ಬೆಳೆಯುತ್ತವೆ ಮತ್ತು ಕಪ್ಪಾಗಿ ಕಾಣುತ್ತವೆ.

6. ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನು ಹೋಗಲಾಡಿಸಲು, ಎರಡು ಹನಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಬೆರಳುಗಳಿಂದ ಕಣ್ಣಿನ ಸುತ್ತಲೂ ಹಾಕಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿ.

7. ಬಿಸಿಲಿನಿಂದ ಸುಟ್ಟು ಕಪ್ಪಾಗಿದ್ದ ತ್ವಚೆ ಮತ್ತೆ ನಾರ್ಮಲ್ ಆಗಬೇಕು ಅಂದರೆ ಕ್ಯಾಸ್ಟರ್ ಆಯಿಲ್ ಅನ್ನು ಲೇಪವಾಗಿ ಹಚ್ಚಿ ಒಂದು ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

8. ಕ್ಯಾಸ್ಟರ್ ಆಯಿಲ್ ಅನ್ನು ತ್ವಚೆಯ ಮೇಲೆ ಲೇಪಿಸಬೇಕು.ಈ ರೀತಿ ಮಾಡುವುದರಿಂದ ಚರ್ಮವು ಬಿಗಿಯಾಗುವುದು ಮಾತ್ರವಲ್ಲದೆ ಸುಕ್ಕುಗಳು ಕಡಿಮೆಯಾಗುತ್ತವೆ.

9. ಕ್ಯಾಸ್ಟರ್ ಆಯಿಲ್ ಅನ್ನು ರಿಂಗ್ವರ್ಮ್ ಮತ್ತು ಮಲಬದ್ಧತೆಯ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ನಾಲ್ಕು ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು 2 ಚಮಚ ಕ್ಯಾಸ್ಟರ್ ಆಯಿಲ್ ಅನ್ನು ಬೆರೆಸಿ ಮೃದುವಾದ ಬಟ್ಟೆಯನ್ನು ಎಣ್ಣೆಯಲ್ಲಿ ಅದ್ದಿ ರಾತ್ರಿಯಿಡೀ ಹೊಟ್ಟೆಯ ಮೇಲೆ ಇರಿಸಿ. ಹೀಗೆ ಮಾಡುವುದರಿಂದ ಜಂತು ಹುಳುಗಳು ಸಾಯುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!