2022ರಲ್ಲಿ ಚೀನಾಕ್ಕಿಂತ 3ಪಟ್ಟು ಹೆಚ್ಚು ಯುನಿಕಾರ್ನ್ ಗಳನ್ನು ಹುಟ್ಟುಹಾಕಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ರಲ್ಲಿ ಭಾರತದ ನವೋದ್ದಿಮೆಗಳು ಹಣದ ಹರಿವಿನ ಕೊರತೆಯಿಂದ ತೊಂದರೆ ಅನುಭವಿಸಿದರೂ ಕೂಡ ವರ್ಷಾಂತ್ಯಕ್ಕೆ ದೇಶದಲ್ಲಿ 21 ಹೊಸ ಯುನಿಕಾರ್ನ್ ಗಳು ಹುಟ್ಟಿಕೊಂಡಿವೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಸ್ಟಾರ್ಟಪ್‌ ಪರಿಸರ ವ್ಯವಸ್ಥೆ ಎಂದು ಕರೆಸಿಕೊಳ್ಳುವ ಚೀನಾಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಕ್ರಂಚ್‌ಬೇಸ್ ವರದಿ ಮಾಡಿರುವ ಪ್ರಕಾರ, ಈ ವರ್ಷ ಚೀನಾದಲ್ಲಿ ಕೇವಲ ಏಳು ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್‌ಗಳಾಗಿ ಪರಿವರ್ತನೆ ಗೊಂಡಿವೆ. ಏತನ್ಮಧ್ಯೆ, 21 ಭಾರತೀಯ ಸ್ಟಾರ್ಟ್‌ಅಪ್‌ಗಳು 1 ಶತಕೋಟಿ ಡಾಲರ್‌ ಮೌಲ್ಯದ ಯುನಿಕಾರ್ನ್ ಕ್ಲಬ್‌ಗೆ ಸೇರಿಕೊಂಡಿವೆ. ಅಲ್ಲಿಗೆ ಭಾರತದ ಒಟ್ಟೂ ಯುನಿಕಾರ್ನ್ ಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.

ಬಂಡವಾಳದ ಕೊರತೆ, ಜಾಗತಿಕವಾಗಿ ಎದುರಾಗಿರುವ ಆರ್ಥಿಕ ಭೀತಿ ಮುಂತಾದ ಕಾರಣಗಳು ಭಾರತದ ನವೋದ್ದಿಮೆ ಕ್ಷೇತ್ರವನ್ನೂ ಬಾಧಿಸಿದುದರ ನಡುವೆಯೂ ಒಂದು ವರ್ಷದಲ್ಲಿ ಚೀನಾಕ್ಕಿಂತ ಮೂರು ಪಟ್ಟು ಹೆಚ್ಚು ಯುನಿಕಾರ್ನ್‌ ಗಳನ್ನು ಹುಟ್ಟು ಹಾಕಿರುವುದು ಭಾರತದ ಸ್ಟಾರ್ಟಪ್‌ ಪರಿಸರ ವ್ಯವಸ್ಥೆಯ ಪರಿಪಕ್ವತೆಯನ್ನು ತೋರಿಸುತ್ತದೆ.

ಆದರೂ, ಭಾರತದ ಯುನಿಕಾರ್ನ್‌ ಆಗಿ ಪರಿವರ್ತನೆಯಾಗುವ ಸ್ಟಾರ್ಟಪ್‌ ಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ 54 ಶೇಕಡಾ ಕುಸಿತವಾಗಿದೆ. 2021ರಲ್ಲಿ 44 ನವೋದ್ದಿಮೆಗಳು ಯುನಿಕಾರ್ನ್‌ ಕ್ಲಬ್‌ ಸೇರಿದ್ದವು. ಆದರೆ 2022ರಲ್ಲಿ 21 ನವೋದ್ದಿಮೆಗಳು ಯುನಿಕಾರ್ನ್‌ ಆಗಿ ಪರಿವರ್ತನೆಯಾಗಿವೆ. ವಿಶೇಷ ಸಂಗತಿಯೇನೆಂದರೆ 2022ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮಹಿಳೆಯರ ನೇತೃತ್ವದ ಯುನಿಕಾರ್ನ್‌ಗಳು ಹುಟ್ಟಿಕೊಂಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!