Tuesday, June 28, 2022

Latest Posts

ಭಾರತದ ನಿಜವಾದ ಪಾಲುದಾರ ರಷ್ಯಾ ಅಲ್ಲ ಅಮೆರಿಕಾ, ಹೀಗಂದಿದ್ಯಾಕೆ ಬಿಡೆನ್‌ ಬಳಗ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ-ಉಕ್ರೇನ್ ಯುದ್ಧ ಮುಗಿದ ನಂತರ, ಭಾರತಕ್ಕೆ ನಿಷ್ಠಾವಂತ ಪಾಲುದಾರನಾಗಿ ಅಮೆರಿಕಾ ಮಾತ್ರ ಉಳಿಯಲಿದೆ ರಷ್ಯಾ ಅಲ್ಲ ಎಂದು ಅಮೆರಿಕಾ ಹೇಳಿದೆ. ಭಾರತದಲ್ಲಿ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ಎಷ್ಟು ದೂರ ಬೇಕಾದರೂ ಪ್ರಯಾಣಿಸಲು ಅಮೆರಿಕಾ ಸಿದ್ಧವಾಗಿದೆ ಎಂಬುದನ್ನು ಬಿಡೆನ್ ಆಡಳಿತ ಮೂಲಗಳು ಬಹಿರಂಗಪಡಿಸಿವೆ.

ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ರಷ್ಯಾ ತನ್ನ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದೆ, ಹೀಗಿರುವಾಗಿ ರಷ್ಯಾ ಭಾರತಕ್ಕೆ ನಿಷ್ಠಾವಂತ ಪಾಲುದಾರನಾಗಿ ಉಳಿಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ, ರಷ್ಯಾ ರಕ್ಷಣಾ ಪರಿಕರಗಳನ್ನು ಒದಗಿಸಲು ಆಗುವುದಿಲ್ಲ. ಹಾಗಾಗಿಯೇ ಭಾರತದೊಂದಿಗೆ ನಮ್ಮ ಪಾಲುದಾರಿಕೆ ಬಲವಾಗಿ ಮುಂದುವರಿಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ, ಆಂಥೋನಿ ಬ್ಲಿಂಕೆನ್ ಅವರ ಮುಖ್ಯ ಸಲಹೆಗಾರ ಡೆರೆಕ್ ಚೋಲೆಟ್ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡೆರೆಕ್, ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ನೋಡುತ್ತಿರುವ ಭಾರತವು ರಕ್ಷಣಾ ಸಾಧನಗಳ ಪೂರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಕ್ಷೇತ್ರದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಯುನೈಟೆಡ್ ಸ್ಟೇಟ್ಸ್ ಬಹಳ ದೃಢವಾಗಿ ನಿರ್ಧರಿಸಿದೆ. ರಕ್ಷಣಾ ವಿಷಯಗಳಲ್ಲಿ ಭಾರತ-ಯುಎಸ್ ಸಂಬಂಧಗಳು ಹಿಂದೆಂದಿಗಿಂತಲೂ ಬಲವಾಗಿವೆ ಎಂದರು.

ಮುಂಬರುವ ದಿನಗಳಲ್ಲಿ ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳು ಹೆಚ್ಚು ಕಷ್ಟಕರವಾಗಲಿವೆ ಮತ್ತು ಕಳೆದ 12 ವಾರಗಳಲ್ಲಿ ಆ ದೇಶದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೆಲವು ಪ್ರಮುಖ ಉತ್ಪನ್ನಗಳನ್ನು ರಫ್ತು ಮಾಡಲು ರಷ್ಯಾದಿಂದ ಸಾಧ್ಯವಾಗುವುದಿಲ್ಲ ಎಂದು ಡೆರೆಕ್ ಹೇಳಿದ್ದಾರೆ.

ರಕ್ಷಣಾ ಉಪಕರಣಗಳು ಸೇರಿದಂತೆ, ನಿರ್ದಿಷ್ಟ ಉತ್ಪನ್ನಗಳನ್ನು ತಯಾರಿಸಲು ಪ್ರಮುಖ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳಲು ರಷ್ಯಾ ಅಸಮರ್ಥವಾಗಿದೆ. ರಕ್ಷಣಾ ಸಾಧನಗಳ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಿರುವಾಗ ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಮಾತನ್ನು ಡೆರೆಕ್ ಹೇಳಿದರು. ಯುಎಸ್-ಭಾರತದ ಸಂಬಂಧವು ಆಳವಾಗಿ ಮತ್ತು ದೃಢವಾಗಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss