VIDEO | ಐಪಿಎಲ್‌ ಮುಗಿಯುವವರೆಗೂ ನೀನನ್ನ ಮಗ ಅಲ್ಲ: ಕೆಎಲ್‌ ರಾಹುಲ್‌ ಕಾಲೆಳೆದ ಸುನೀಲ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಾಗಲೇ ಐಪಿಎಲ್‌ ಫೀವರ್‌ ರಂಗೇರಿದ್ದು, ರಂಗು ರಂಗಿನ ಜಾಹೀರಾತುಗಳು ಜನರಿಗೆ ಮನರಂಜನೆ ನೀಡುತ್ತಿವೆ.

ಇದೀಗ ಬೆಟ್ಟಿಂಗ್‌ ಆಪ್‌ ಡ್ರೀಮ್‌ 11 ಬಿಡುಗಡೆ ಮಾಡಿರುವ ಜಾಹೀರಾತು ಸಿಕ್ಕಾಪಟ್ಟೆ ಫನ್ನಿಯಾಗಿದ್ದು, ಎಲ್ಲೆಡೆ ವೈರಲ್‌ ಆಗಿದೆ. ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, ಕೆಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಈ ಆಡ್‌ನಲ್ಲಿ ಕಾಣಿಡಿಕೊಂಡಿದ್ದಾರೆ.

ಸುನೀಲ್‌ ಶೆಟ್ಟಿ ಮುಂಬೈ ಇಂಡಿಯನ್ಸ್‌ ತಂಡವನ್ನು ಬೆಂಬಲಿಸಿದ್ದು, ರೋಹಿತ್‌ ಶರ್ಮ ಮುಂಬೈ ಟೀಂ ಆಟಗಾರರಾಗಿದ್ದಾರೆ. ಇನ್ನು ಅಳಿಯ ಕೆಎಲ್‌ ರಾಹುಲ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ವಿಡಿಯೋದಲ್ಲೇನಿದೆ?
ರೆಸ್ಟೋರೆಂಟ್‌ ಒಂದರಲ್ಲಿ ರೋಹಿತ್‌ ಶರ್ಮಾ ಹಾಗೂ ಸುನೀಲ್‌ ಶೆಟ್ಟಿ ಊಟ ಮಾಡುತ್ತಿರುತ್ತಾರೆ. ಮಾವನ ಜೊತೆ ಊಟ ಮಾಡೋದಕ್ಕೆ ಕೆಎಲ್‌ ರಾಹುಲ್‌ ಬಂದಾಗ ರೋಹಿತ್‌ ಶರ್ಮಾ, ನಮ್ಮದು ಫ್ಯಾಮಿಲಿ ಡಿನ್ನರ್‌ ನೀನು ಬೇಡ ಎಂದು ಹೇಳಿದ್ದಾರೆ. ಅದಕ್ಕೆ ರಾಹುಲ್‌ ದುಃಖದಲ್ಲಿ ಪಾಪಾ ಎಂದು ಸುನೀಲ್‌ ಮುಖ ನೋಡುತ್ತಾರೆ. ಆಗ ಸುನೀಲ್‌” ಐಪಿಎಲ್‌ ಮುಗಿಯುವವರೆಗೂ ನೀನು ನನ್ನಮಗನೇ ಅಲ್ಲ, ರೋಹಿತ್‌ ನನ್ನ ಮಗ ಎಂದು ಹೇಳಿ ಮುದ್ದು ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!