ವಿದ್ಯಾರ್ಥಿಗಳೇ ಗಮನಿಸಿ…ಪಾಕಿಸ್ತಾನದಲ್ಲಿ ಪಡೆದ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ: ಮಹತ್ವದ ಆದೇಶಕೊಟ್ಟ UGC, AICTE!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನದ ಯಾವುದೇ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಾರದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮತ್ತು ಎಐಸಿಟಿಇ ಎಚ್ಚರಿಕೆ ನೀಡಿವೆ.
UGC ಪ್ರಕಾರ, ಪಾಕಿಸ್ತಾನದಿಂದ ಬರುವ ವಿದ್ಯಾರ್ಥಿಗಳು ಭಾರತದಲ್ಲಿ ಯಾವುದೇ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಅರ್ಹರಾಗಿರುವುದಿಲ್ಲ. ಅದೇ ರೀತಿ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ ಅಥವಾ ಹೆಚ್ಚಿನ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದಿದೆ.
ಈ ಮೂಲಕ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಬಾರದು ಎಂದು ಯುಜಿಸಿ ಮತ್ತು ಎಐಸಿಟಿಇ ಹೇಳಿದೆ.ಒಂದು ವೇಳೆ ಹೋಗಲು ಇಚ್ಚಿಸಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಉದ್ಯೋಗ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿ ಸಾಧ್ಯವಾಗುವುದಿಲ್ಲ ಎಂದಿದೆ.
ಆದರೆ ಪಾಕಿಸ್ತಾನದಿಂದ ಬಂದಿರುವ ವ್ಯಕ್ತಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಇಲ್ಲಿ ಯುಜಿಸಿ ಸ್ಪಷ್ಟಪಡಿಸಿದೆ. ಪಾಕಿಸ್ತಾನದಿಂದ ವಲಸಿಗರು ಮತ್ತು ಭಾರತದಿಂದ ಪೌರತ್ವ ಪಡೆದ ಅವರ ಮಕ್ಕಳು ಗೃಹ ವ್ಯವಹಾರಗಳ ಸಚಿವಾಲಯದ ಅನುಮೋದನೆಯ ನಂತರ ಭಾರತದಲ್ಲಿ ಉದ್ಯೋಗಕ್ಕೆ ಅರ್ಹರಾಗುತ್ತಾರೆ.
ಪಾಕಿಸ್ತಾನ ಸಂಸ್ಥೆಯ ಪದವಿಯು ಭಾರತೀಯ ಸಂಸ್ಥೆಯ ಪದವಿಗೆ ಸಮನಾಗಿರುವುದಿಲ್ಲ. ಮಾನ್ಯತೆ ಪಡೆಯದ ಸಂಸ್ಥೆಗಳಲ್ಲಿ ಓದಿದ ನಂತರ ಪಡೆದ ಪದವಿ ಭಾರತೀಯ ಸಂಸ್ಥೆಗಳಲ್ಲಿನ ಪದವಿಗೆ ಸಮನಾಗಿರುವುದಿಲ್ಲ ಎಂದು AICTE ಹೇಳುತ್ತದೆ. ಇಂತಹ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ಪದವಿ ಪಡೆಯಲುಶುಲ್ಕವನ್ನು ವ್ಯಯಿಸಿದರೂ, ಅಂತಹ ವಿದ್ಯಾರ್ಥಿಗಳು ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇಂತಹ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಚೀನಾಕ್ಕೂ ಅನ್ವಯ!
ಇನ್ನುಪಾಕಿಸ್ತಾನದ ಹೊರತಾಗಿ, UGC AICTE ಚೀನಾದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇಂತಹ ಸಲಹೆಯನ್ನು ನೀಡಿದೆ. ಈ ವರ್ಷದ ಮಾರ್ಚ್‌ನಲ್ಲಿ ನೀಡಲಾದ ಸಲಹೆಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಭಾರತೀಯ ವಿದ್ಯಾರ್ಥಿಗಳಿಗೆ ಚೀನಾದ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗದಂತೆ ಸಲಹೆ ನೀಡಿತ್ತು. ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ನಡೆಸುವ ಇಂತಹ ಪದವಿ ಕೋರ್ಸ್‌ಗಳಿಗೆ ಯುಜಿಸಿ ಮತ್ತು ಎಐಸಿಟಿಇ ಎರಡೂ ಮಾನ್ಯತೆ ನೀಡುವುದಿಲ್ಲ ಎಂದು ಈ ಸಲಹೆಯಲ್ಲಿ ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!