ಪ್ರಯಾಣಿಕರೇ ಗಮನಿಸಿ: ಜನವರಿ 27 ರಿಂದ 4 ದಿನ ಮೆಟ್ರೊ ರೈಲು ಸೇವೆ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 27ರಿಂದ ಜನವರಿ 30ರವರೆಗೆ ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಮೆಟ್ರೊ ರೈಲು ಸೇವೆಯನ್ನು 4 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೆಂಗೇರಿಯಿಂದ ಚೆಲ್ಲಘಟ್ಟದವರೆಗೆ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಕಾಮಗಾರಿ ನಡೆಯುತ್ತಿರುವುದರಿಂದ ನೇರಳೆ ಮಾರ್ಗದ ಮೆಟ್ರೊ ರೈಲು ಸೇವೆಗಳನ್ನು ನಾಲ್ಕು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಈ ದಿನಗಳಲ್ಲಿ ಭೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸೇವೆಗಳಿರುತ್ತವೆ.

ಭೈಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೆ ರೈಲು ಸೇವೆಗಳು ಜನವರಿ 31ಕ್ಕೆ ಬೆಳಗ್ಗೆ 5 ಗಂಟೆಗೆ ಪುನಾರಂಭವಾಗುತ್ತದೆ.
ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ ಎಂದು ಮೆಟ್ರೊ ರೈಲು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!