ರೋಹಿತ್-ಗಿಲ್​ ಅಬ್ಬರದ ಬ್ಯಾಟಿಂಗ್: ನ್ಯೂಜಿಲ್ಯಾಂಡ್ ಗೆಲುವಿಗೆ ಬೃಹತ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದೋರ್​ನಲ್ಲಿ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಅವರ ಅಬ್ಬರದ ಬ್ಯಾಟಿಂಗ್ ನಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ 9 ವಿಕೆಟ್​ಗೆ 385 ರನ್​ ಪೇರಿಸಿ ಬೃಹತ್ ಟಾರ್ಗೆಟ್ ನೀಡಿದೆ.

ಕಿವೀಸ್​ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್​- ಗಿಲ್​ ತಮ್ಮ ಆಟವನ್ನು ಮುಂದುವರಿಸಿದ್ದು, ಸಿಕ್ಸರ್​, ಬೌಂಡರಿ ಮೂಲಕ ಕಿವೀಸ್​ ಬೌಲರ್​ಗಳ ಬೆವರಿಳಿಸಿದರು.

ಉಭಯ ಆಟಗಾರರು 20 ಓವರ್​ ವೇಳೆಗೆ ಬರೋಬ್ಬರಿ 200 ರನ್​ ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇದೇ ವೇಳೆ ರೋಹಿತ್​ ರೋಹಿತ್​ ಮತ್ತು ಶುಭಮನ್​ ಗಿಲ್​ ಶತಕವನ್ನೂ ಪೂರೈಸಿದರು.

ಒಟ್ಟು 85 ಎಸೆತ ಎದುರಿಸಿದ ರೋಹಿತ್​ 6 ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ 101 ರನ್​ ಗಳಿಸಿ ಬ್ರೇಸ್​ವೆಲ್​ಗೆ ವಿಕೆಟ್​ ಒಪ್ಪಿಸಿದರು. ಗಿಲ್​ ಮತ್ತು ರೋಹಿತ್​ ಮೊದಲ ವಿಕೆಟ್​ಗೆ ಬರೋಬ್ಬರಿ 212 ರನ್​ ಜತೆಯಾಟ ನಡೆಸಿದರು.

ರೋಹಿತ್​ ಶರ್ಮಾ ವಿಕೆಟ್​ ಪತನದ ಬಳಿಕ 18 ರನ್​ ಆಗುವ ವೇಳೆಗೆ ಶುಭಮನ್​ ಗಿಲ್​ ವಿಕೆಟ್​ ಕೂಡ ಬಿತ್ತು. ಶುಭಮನ್​ ಗಿಲ್​ 78 ಎಸೆತ ಎದುರಿಸಿ 122 ರನ್​ ಬಾರಿಸುವ ಮೂಲಕ ಶತಕ ಪೂರೈಸಿದರು.

ಶುಭಮನ್​ ಮತ್ತು ರೋಹಿತ್​ ವಿಕೆಟ್​ ಪತನದ ಬಳಿಕ ತಂಡದ ಮೊತ್ತ ಹಠಾತ್​ ಕುಸಿತ ಕಂಡಿತು. ವಿರಾಟ್​ ಕೊಹ್ಲಿ(36), ಸೂರ್ಯಕುಮಾರ್​ ಯಾದವ್(14),​ ಇಶಾನ್​ ಕಿಶನ್(17)​ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು.

ಒಂದೊಡೆ ತಂಡದ ವಿಕೆಟ್​ ಬೀಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತ ಉಪನಾಯಕ ಹಾರ್ದಿಕ್​ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಪಾಂಡ್ಯ 54 ರನ್​ ಬಾರಿಸಿದರು. ಇವರಿಗೆ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ ಉತ್ತಮ ಸಾಥ್​ ನೀಡಿದರು. ಶಾರ್ದೂಲ್​ ಒಟ್ಟು 17 ಎಸೆತಗಳಿಂದ 25 ರನ್​ ಗಳಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 9 ವಿಕೆಟ್​ ಪತನಗೊಂಡು 385 ರನ್​ ಗಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!