ಯಾವುದನ್ನೂ ಫ್ರೀಯಾಗಿ ಜನರಿಗೆ ಕೊಡಬಾರದು: ನಾರಾಯಣ ಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದನ್ನೂ ಉಚಿತವಾಗಿ ನೀಡಬಾರದು, ನೀಡಿದರೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಉಪಯೋಗ ಮಾಡಬೇಕು ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮೇಳನದಲ್ಲಿ ಮಾತನಾಡಿದ್ದು, ಯಾವುದನ್ನೂ ಫ್ರೀಯಾಗಿ ಕೊಡಬಾರದು, ಕೊಟ್ಟರೆ ಅದನ್ನು ಪಡೆದುಕೊಂಡವರು ಸಮಾಜದ ಒಳಿತಿಗೆ ಏನಾದರೂ ಮಾಡಬೇಕು ಎಂದಿದ್ದಾರೆ.

ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಸುಧಾರಣೆಗೆ ಮತ್ತೆ ಕೊಡುಗೆ ನೀಡಬೇಕು. ಭಾರತದಂತಹ ದೇಶ ಸಮೃದ್ಧ ರಾಷ್ಟ್ರವಾಗಲು ಸಹಾನುಭೂತಿಯ ಬಂಡವಾಳಶಾಹಿಯೇ ಏಕೈಕ ಪರಿಹಾರವಾಗಿದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಉಚಿತ ವಿದ್ಯುತ್ ನೀಡಿದಾಗ ಶಾಲೆಗಳಲ್ಲಿ ಶೇ. 20ರಷ್ಟು ಹಾಜರಾತಿ ಹೆಚ್ಚಾಗಬೇಕು. ಉಚಿತದ ಪ್ರಯೋಜನ ಜನತೆಗೆ ಸಿಗಬೇಕು. ಅದರಿಂದ ಜನ ಇನ್ನೇನನ್ನೋ ಸಾಧಿಸಬೇಕು. ಕಲಿಯಬೇಕು, ಜೀವನಮಟ್ಟ ಸುಧಾರಿಸಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!