ಮತ್ತೊಂದು ವಿವಾದದಲ್ಲಿ ‘ಪಠಾಣ್’: ಸಿನಿಮಾ ಬ್ಯಾನ್‌ಗೆ ಮುಸ್ಲಿಮರಿಂದಲೂ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ವಿವಾದಗಳ ಕೇಂದ್ರ ಬಿಂದುವಾಗಿದೆ. ಇವುಗಳನ್ನು ನಿವಾರಿಸಿಕೊಂಡು ಸಿನಿಮಾ ರಿಲೀಸ್‌ ಮಾಡುವುದು ಹೇಗೆ ಎಂದು ಚಿತ್ರತಂಡಕ್ಕೆ ತಲೆಬಿಸಿ ಮಾಡುಕೊಂಡಿರುವಾಗಲೇ ಇದೀಗ ಇನ್ನೊಂದು ವಿವಾದ ಚಿತ್ರಕ್ಕೆ ಆತಂಕ ತಂದಿದೆ. ಈ ಸಿನಿಮಾ ವಿರುದ್ಧ ಮುಸ್ಲಿಂ ಸಮುದಾಯದವರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಈ ಸಿನಿಮಾ ಬಿಡುಗಡೆ ಮಾಡದಂತೆ  ಕೆಲ ಮುಸ್ಲಿಂ ಸಮುದಾಯಗಳು ಆಗ್ರಹಿಸುತ್ತಿವೆ.

ಮಧ್ಯಪ್ರದೇಶದ ಉಲೇಮಾ ಮಂಡಳಿಯು ಬೇಷರಂ ರಂಗ್ ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಠಾಣರು ಬಹಳ ಗೌರವಾನ್ವಿತರು ಮತ್ತು ಅವರು ಅತ್ಯಂತ ಗೌರವಾನ್ವಿತ ಸಮುದಾಯ ಕೂಡ ಹೌದು. ಆದರೆ ಈ ಚಿತ್ರದಲ್ಲಿ ಅವರನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂದು ಉಲೇಮಾ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಿನಿಮಾ ರಿಲೀಸ್ ಆಗದಂತೆ ತಡೆಯಿರಿ ಇಲ್ಲದಿದ್ದರೆ ಚಿತ್ರದಲ್ಲಿನ ಅಶ್ಲೀಲ ದೃಶ್ಯಗಳನ್ನು ತೆರೆಯಿಂದ ತೆಗೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಖಿಲ ಭಾರತ ಮುಸ್ಲಿಂ ಉತ್ಸವ ಸಮಿತಿಯಿಂದ ಚಲನಚಿತ್ರವನ್ನು ಬಹಿಷ್ಕರಿಸಲಾಗಿದೆ ಎಂದು ಉಲೇಮಾ ಮಂಡಳಿ ಅಧ್ಯಕ್ಷ ಸೈಯದ್ ಅನಸ್ ಅಲಿಸ್ ತಿಳಿಸಿದ್ದಾರೆ.

ಈ ಚಿತ್ರವನ್ನು ನೋಡಬೇಡಿ ಎಂದು ನಾವು ಸಾರ್ವಜನಿಕರಿಗೆ ಮತ್ತು ಯೋಧರಿಗೆ ಮನವಿ ಮಾಡುತ್ತೇವೆ. ಯಾರಾದರೂ ಇಸ್ಲಾಂ ಧರ್ಮವನ್ನು ತಪ್ಪಾಗಿ ತೋರಿಸಿದ್ದಲ್ಲಿ ನಮ್ಮ ಧರ್ಮದ ಸರಿಯಾದ ವ್ಯಾಖ್ಯಾನವನ್ನು ಬಹಿರಂಗಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾನು ಸೆನ್ಸಾರ್ ಮಂಡಳಿಗೆ ಮನವಿ ಮಾಡುತ್ತೇನೆ. ಈ ಚಿತ್ರವನ್ನು ಎಲ್ಲಿಯೂ ಪ್ರದರ್ಶಿಸಬೇಡಿ ಎಂದು ನಾನು ಭಾರತದ ಎಲ್ಲಾ ಥಿಯೇಟರ್‌ಗಳಿಗೆ ಹೇಳಲು ಬಯಸುತ್ತೇನೆ. ಇಲ್ಲಿ ತಪ್ಪು ಸಂದೇಶ ರವಾನೆಯಾಗಿ ಶಾಂತಿ ಕದಡುತ್ತಿದೆ. ಈ ದೇಶದ ಎಲ್ಲ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವುದುರ ಜೊತೆಗೆ ನಮ್ಮನ್ನು ಗೇಲಿ ಮಾಡುತ್ತದೆ ಎಂದು ಅಧ್ಯಕ್ಷ ಸೈಯದ್ ಅನಸ್ ಅಲಿಸ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!