ಪ್ರತಿ ರಸ್ತೆ, ಪ್ರತಿ ಮೂಲೆಯಲ್ಲೂ ಮಸೀದಿ ಇರಬೇಕು ಎಂದು ಕುರಾನ್‌ನಲ್ಲಿ ಎಲ್ಲಿಯೂ ಹೇಳಿಲ್ಲ: ಕೇರಳ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯವು ಈಗಾಗಲೇ ಹೆಚ್ಚಿನ ಸಂಖ್ಯೆಯ ಧಾರ್ಮಿಕ ರಚನೆಗಳು ಹಾಗೂ ಕೇಂದ್ರಗಳನ್ನು ಹೊಂದಿದೆ ಮತ್ತು ಜನಸಂಖ್ಯೆಗೆ ಧಾರ್ಮಿಕ ರಚನೆಗಳ ಅನುಪಾತವು ತುಂಬಾ ಹೆಚ್ಚಾಗಿದೆ ಎಂಬುವುದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ಹಲವು ಮಸೀದಿಗಳನ್ನು ಹೊಂದಿರುವ ಪ್ರದೇಶದಲ್ಲಿ ಮತ್ತೊಂದು ಮಸೀದಿ ನಿರ್ಮಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

‘ದೇವರ ಸ್ವಂತ ನಾಡು’ ಎಂದು ವ್ಯಾಪಕವಾಗಿ ಹೇಳಲಾಗುವ ಕೇರಳವು ಧಾರ್ಮಿಕ ಸ್ಥಳಗಳು, ಅಂಥ ಕೇಂದ್ರಗಳಿಂದಲೇ ತುಂಬಿ ತುಳುಕುತ್ತಿದೆ ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ಇದನ್ನು ‘ದೇವರ ಸ್ವಂತ ನಾಡು’ ಎಂದು ಕರೆಯಲಾಗುತ್ತದೆ. ಆದರೆ ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ತುಂಬಿ ಹೋಗಿದ್ದೇವೆ ಮತ್ತು ತೀರಾ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಮುಸ್ಲಿಂ ಸಮುದಾಯಕ್ಕೆ ಮಸೀದಿಗಳು ಬಹಳ ಮುಖ್ಯ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ಕುರಾನ್‌ನಲ್ಲಿ ಪ್ರತಿ ರಸ್ತೆ, ಪ್ರತಿ ಮೂಲೆಯಲ್ಲೂ ಮಸೀದಿ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ, ನ್ಯಾಯಾಲಯವು ಪವಿತ್ರ ಓರ್-ಆನ್‌ನ ಜುಜ್ 10 ಸೂರಾ 18 ಮತ್ತು ಜುಜ್ 1 ಸೂರಾ 114 ಮತ್ತು ರಿಯಾದಸ್ ಸಾಲಿಹೀನ್ ಅವರ ಷರತ್ತು 10 64 ಅನ್ನು ಉಲ್ಲೇಖ ಮಾಡಿದೆ.

‘ಕುರಾನ್‌ನ ಮೇಲಿನ ಸಾಲುಗಳು, ಮುಸ್ಲಿಂ ಸಮುದಾಯಕ್ಕೆ ಮಸೀದಿಯ ಮಹತ್ವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಆದರೆ ಪವಿತ್ರ ಕುರಾನ್‌ನ ಮೇಲಿನ ಸಾಲುಗಳಲ್ಲಿ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಮಸೀದಿ ಅಗತ್ಯ ಎಂದು ಹೇಳಿಲ್ಲ. “ಹದೀಸ್” ಅಥವಾ ಪವಿತ್ರ ಕುರ್-ಆನ್‌ನಲ್ಲಿ ಮಸೀದಿಯು ಪ್ರತಿಯೊಬ್ಬ ಮುಸ್ಲಿಂ ಸಮುದಾಯದ ಸದಸ್ಯರ ಮನೆಯ ಪಕ್ಕದಲ್ಲಿದೆ ಎಂದು ಹೇಳಲಾಗಿಲ್ಲ. ದೂರವು ಮಾನದಂಡವಲ್ಲ, ಆದರೆ ಮಸೀದಿಯನ್ನು ತಲುಪುವುದು ಮುಖ್ಯ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ.

ಇನ್ನು 2011 ರ ಜನಗಣತಿಯ ಆಧಾರದ ಮೇಲೆ ಧಾರ್ಮಿಕ ರಚನೆಗಳ ಮೇಲಿನ ಅಧ್ಯಯನವನ್ನು ಉಲ್ಲೇಖಿಸಿದ ನ್ಯಾಯಾಲಯವು’ಆತಂಕಕಾರಿ’ ಎಂದು ಕರೆದಿದೆ. ಕೇರಳದ ಗ್ರಾಮಗಳಲ್ಲಿ ಅಂದಾಜು 10ರಷ್ಟು ಧಾರ್ಮಿಕ ರಚನೆಗಳಿವೆ. ಇದು ಆಸ್ಪತ್ರೆಗಳ ಸಂಖ್ಯೆಗಿಂತ 3.5 ಪಟ್ಟು ಹೆಚ್ಚಳ ಎಂದು ಕೋರ್ಟ್‌ ಹೇಳಿದೆ.

ಕೇರಳವು ಧಾರ್ಮಿಕ ಸಂಸ್ಥೆಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ದಣಿದು ಹೋಗಿದೆ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿಗಳು, ಪಾರ್ಸಿಗಳು ಇತ್ಯಾದಿ ಪ್ರತಿಯೊಬ್ಬ ಭಕ್ತರು ತಮ್ಮ ಮನೆಯ ಬಳಿಯೇ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ರಾಜ್ಯವು ಕೋಮು ಸೌಹಾರ್ದತೆ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಗುಪ್ತಚರ ವರದಿ ಮತ್ತು ಪೊಲೀಸ್ ವರದಿಯು ಪ್ರಕಾರ, ಪ್ರಸ್ತುತ ವಾಣಿಜ್ಯ ಕಟ್ಟಡವನ್ನು ಧಾರ್ಮಿಕ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಲು ಅನುಮತಿ ನೀಡಿದರೆ, ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಅವಕಾಶವಿದೆ ಎಂದು ಹೇಳುತ್ತದೆ, ಇದು ಸೂಕ್ಷ್ಮ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿಯೇ ಇದೇ ಪ್ರದೇಶದ ಅಕ್ಕಪಕ್ಕದಲ್ಲಿ 36 ಮಸೀದಿಗಳು ಅಸ್ತಿತ್ವದಲ್ಲಿದೆ. ಇಸ್ಲಾಂ ಧರ್ಮದ ಅನುಯಾಯಿಗಳು ಹತ್ತಿರದ ಇತರ ಮಸೀದಿಗಳಿಗೆ ಹೋಗುವ ಅವಕಾಶವಿದೆ. ಹೆಚ್ಚು ಜನರಿದ್ದಾರೆ ಎನ್ನುವ ಕಾರಣಕ್ಕೆ ಇನ್ನೊಂದು ಮಸೀದಿಯ ಅಗತ್ಯ ಈ ಪ್ರದೇಶದಲ್ಲಿಲ್ಲ. ಅದಲ್ಲದೆ, ಹೆಚ್ಚಿನ ನಾಗರೀಕರ ಬಳಿಯಲ್ಲಿ ಈಗ ವಾಹನಗಳಿವೆ ಸಮೀಪದ ಮಸೀದಿಗಳಿಗೆ ಸುಲಭವಾಗಿ ಹೋಗಬಹುದು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!