Wednesday, October 5, 2022

Latest Posts

ಪ್ರೊ ಕಬಡ್ಡಿ ಲೀಗ್​​ ಆರಂಭಕ್ಕೆ ಮುಹೂರ್ತ​​​​ ಫಿಕ್ಸ್: ಬೆಂಗಳೂರು ಸಹಿತ 3 ಸ್ಥಳಗಳಲ್ಲಿ ನಡೆಯಲಿದೆ ಪಂದ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೊ ಕಬಡ್ಡಿ ಲೀಗ್​​ ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಟೂರ್ನಿ ಆರಂಭಗೊಳ್ಳಲು ವೇಳಾಪಟ್ಟಿ ನಿಗದಿ ಮಾಡಲಾಗಿದೆ.
9ನೇ ಆವೃತ್ತಿ ಅಕ್ಟೋಬರ್​​ 7ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್​​ ಮಧ್ಯದವರೆಗೂ ಟೂರ್ನಿ ನಡೆಯಲಿದೆ.
ಬೆಂಗಳೂರು, ಪುಣೆ ಹಾಗೂ ಹೈದರಾಬಾದ್​​​ನಲ್ಲಿ ಲೀಗ್​ ಹಂತದ ಎಲ್ಲ ಪಂದ್ಯಗಳು ನಡೆಯಲಿವೆ. ಈ ಸಲದ ಆವೃತ್ತಿಯಲ್ಲಿ ಪಂದ್ಯಗಳ ವೀಕ್ಷಣೆ ಮಾಡಲು ಪ್ರೇಕ್ಷಕರಿಗೆ ಅನುಮತಿಸಲಾಗಿದೆ.

ಲೀಗ್​​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಗೋಸ್ವಾಮಿ ಮಾತನಾಡಿ, ಪ್ರೊ ಕಬಡ್ಡಿ ಲೀಗ್ ಆಯೋಜನೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಕಳೆದ ವರ್ಷದ ಟೂರ್ನಮೆಂಟ್​ ಬಯೋ ಬಬಲ್​​ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಸಲ ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಿರುವ ಕಾರಣ ಪ್ರೇಕ್ಷಕರು ಆಟ ಕಣ್ತುಂಬಿಕೊಳ್ಳಬಹುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!