ಸಿನಿಮಾಗೂ ಮೊದಲೇ ನೀಲ್-ಯಂಗ್‌ ಟೈಗರ್‌ ಫ್ಯಾಮಿಲಿ ಸೆಲಬ್ರೇಷನ್..!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್‌ಆರ್‌ಆರ್‌ ಸಿನಿಮಾ ಮೂಲಕ ಜ್ಯೂ.ಎನ್‌ಟಿಆರ್‌ ಪ್ಯಾನ್‌ ಇಂಡಿಯಾ ಆಗಿ, ಕೆಜಿಎಫ್ ಚಿತ್ರದಿಂದ ಪ್ರಶಾಂತ್‌ ನೀಲ್‌ ಪ್ಯಾನ್‌ ಇಂಡಿಯಾ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿದ ಬಳಿಕ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂಬ ಸುದ್ದಿ ಹೊಸದೇನಲ್ಲ.

ಆದರೆ ಅದಕ್ಕೂ ಮೊದಲೇ ಪ್ರಶಾಂತ್‌ ನೀಲ್‌ ಹಾಗೂ ಎನ್‌ಟಿಆರ್‌ ಫ್ಯಾಮಿಲಿಯೊಂದಿಗೆ ಸೆಲಬ್ರೇಷನ್‌ ಮಾಡಿಕೊಂಡಿದ್ದಾರೆ. ಸಿನಿ ರಂಗದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ಹೀರೋ, ಹಿರೋಯಿನ್‌, ನಿರ್ದೇಶಕರು ವಿಶೇಷ ಸಂದರ್ಭದಲ್ಲಿ ಭೇಟಿ ಮಾಡಿ ಪಾರ್ಟಿ ಮಾಡೋದು ಕಾಮನ್.‌ ಆದರೆ ಇನ್ನೂ ಸಿನಿಮಾ ಸೆಟ್ಟೇರದೆ ಎರಡೂ ಕುಟುಂಬದವರು ಪಾರ್ಟಿ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಮೇ 5ರಂದು ಜ್ಯೂ.ಎನ್‌ಟಿಆರ್‌ ದಂಪತಿ ಮದುವೆ ವಾರ್ಷಿಕೋತ್ಸವ. ಪ್ರಶಾಂತ್‌ ನೀಲ್‌ ದಂಪತಿ ಮದುವೆ ದಿನ ಕೂಡ ಅಂದೇ ಎಂದು ತಿಳಿದ ತಾರಕ್‌, ತನ್ನ ಪತ್ನಿ ಸಮೇತ ಮನೆಗೆ ಬರುವಂತೆ ಪ್ರಶಾಂತ್‌ಗೆ ಆಹ್ವಾನಿಸಿದ್ದಾರೆ. ತಾರಕ್‌ ಆಹ್ವಾನದ ಮೇರೆಗೆ ಈ ಎರಡೂ ಜೋಡಿ ಜ್ಯೂ.ಎನ್‌ಟಿಆರ್‌ ನಿವಾಸದಲ್ಲಿ ಮದುವೆ ವಾರ್ಷಕೋತ್ಸವವನ್ನ ಆಚರಣೆ ಮಾಡಿಕೊಂಡಿದ್ದಾರೆ.

ಈ ವಿಚಾರವನ್ನು ತಾರಕ್‌ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್‌ ಮಾಡಿದ್ದು, ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!