ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗಿನ ಸಂಚಾರವು ನಿನ್ನೆಯಿಂದ ಪ್ರಾರಂಭವಾಗಿದೆ.
ಕೇವಲ ನಿನ್ನೆ ಒಂದೇ ದಿನಕ್ಕೆ 54,000ಕ್ಕೂ ಅಧಿಕ ಮಂದಿ ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಈ ಮಾರ್ಗದಲ್ಲಿ ಐಟಿ ಉದ್ಯೋಗಿಗಳು ಮೆಟ್ರೋ ಸೇವೆ ಪಡೆದಿದ್ದು, ಹೆಚ್ಚು ಸಂತಸಗೊಂಡಿದ್ದಾರೆ.