ಅಡಿಕೆ ಬೆಳೆಗಾರರು ಯಾರೂ ಚಿಂತೆ ಮಾಡಬೇಡಿ: ಕೇಂದ್ರ ಕೃಷಿ ಸಚಿವ ಚೌಹಾಣ್ ಭರವಸೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಡಿಕೆಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.

ಸಾಗರ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಬೆಳೆಗೆ ತಕ್ಕ ಬೆಲೆ ನೀಡಬೇಕಿದೆ. ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಹಣ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಬೇಕು. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಬನ್ನಿ ಎಂದರು, ಹಾಗಾಗಿ ನಾನಿಲ್ಲಿಗೆ ಬಂದೆ. ನಾನಿಲ್ಲಿಗೆ ನಾನು ಯಾವುದೇ ಪಕ್ಷದ ನಾಯಕನಾಗಿ ಬಂದಿಲ್ಲ. ಕೇಂದ್ರದ ಸಚಿವನಾಗಿ ಯಾವುದೇ ಗರ್ವದಿಂದ ಬಂದಿಲ್ಲ. ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಯಾರಿಗೆ ರೈತರ ಬಗ್ಗೆ ಕಾಳಜಿ ಇರುವುದಿಲ್ಲವೋ ಅವರು ಕೃಷಿ ಸಚಿವರಾಗಬಾರದು. ಪ್ರತಿ ಮನೆಯಲ್ಲೂ ನಾವು ಅಡಿಕೆ ಬಳಸುತ್ತೇವೆ. ನಮ್ಮ ಭಾಗದಲ್ಲಿ ಅಡಕೆ ಬಳಸುತ್ತೇವೆ. ಪೂಜೆ ಸಂದರ್ಭದಲ್ಲಿ ಅಡಿಕೆ ಗಣೇಶನಾಗಿ, ದೇವರಾಗಿ ಬದಲಾಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಅಡಿಕೆಯ ಉಪಯೋಗ ಇದೆ. ನಾನು ಕೃಷಿ ಮಂತ್ರಿಯನ್ನು ಭೇಟಿಯಾಗಿ ಬಂದೆ. ನಮಗೆ ಯಾವ ಸರ್ಕಾರ ಇಲ್ಲಿ ಇದೆ ಎಂಬುವುದು ಮುಖ್ಯ ಅಲ್ಲ, ರೈತರ ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದು ಅವರು ಹೇಳಿದರು.

ಅಡಿಕೆ ಬೆಳೆಗಾರರು ಯಾರೂ ಚಿಂತೆ ಮಾಡಬೇಡಿ, ನಿಮ್ಮೊಂದಿಗೆ ನಾವು ಇದ್ದೇವೆ. ವಿಕಸಿತ ಭಾರತ, ವಿಕಸಿತ ಕರ್ನಾಟಕ ನಿರ್ಮಾಣ ಮಾಡಬೇಕಿದೆ. ನಾವು ದೇಶವನ್ನು ನಡೆಸಬೇಕಿದೆ, ಜನರ ಜೀವನ ಸುಧಾರಿಸಬೇಕಿದೆ. ಜನರ ಜೀವನ ಸುಧಾರಿಸಿದರೆ ನಮ್ಮ ಸರ್ಕಾರದ ಆಶಯ ಈಡೇರುತ್ತದೆ ಎಂದು ಚೌಹಾಣ್ ಹೇಳಿದರು.

ಕಳೆದ ವರ್ಷ ಅಡಕೆ ಬೆಳೆಗೆ ಸಾಕಷ್ಟು ಹಾನಿ ಆಗಿದೆ. ಅಡಿಕೆಗೆ ಬಾಧಿಸುವ ರೋಗಗಳ ಸಂಶೋಧನೆಗೆ ತಂಡ ರಚಿಸುತ್ತೇವೆ. ಇದಕ್ಕಾಗಿ ಈ ಬಜೆಟ್​​​ನಲ್ಲಿ 67 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ಅಡಿಕೆ ತಿನ್ನುವುದರಿಂದ ಕಾನ್ಸರ್ ಬರುತ್ತದೆ ಎಂಬ ವದಂತಿ ಇದೆ. ಆದರೆ, ಅಡಿಕೆಯನ್ನು ಹಿಂದಿನಿಂದಲೂ ಜನ ಬಳಸುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸಲು 16 ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅಡಿಕೆಗೆ ಬಗ್ಗೆ ಇರುವ ವಂದತಿಗಳನ್ನು ದೂರ ಮಾಡುತ್ತೇವೆ ಎಂದರು ಸಚಿವರು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!