ಮಕ್ಕಳ ತೂಕ ಹೆಚ್ಚಿಸುವ ನಟ್ಸ್‌ ಪೌಡರ್‌ ರೆಸಿಪಿ ಬಗ್ಗೆ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಗಿನ ಮಕ್ಕಳು ಕೇವಲ ಜಂಕ್‌ಫುಡ್‌ ರುಚಿಯಲ್ಲಿ ಬಿದ್ದು, ದೇಹಕ್ಕೆ ಪೂರಕವಾದ ಪೋಷಕಾಂಶಗಳುಳ್ಳ ಆಹಾರದ ಪರಿವೇ ಇಲ್ಲದಂತೆ ಇರುತ್ತಾರೆ. ಅಪೌಷ್ಟಿಕತೆಯಿಂದಾಗಿ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗಿ ಆಯಾಸ ರೋಗ ಕಂಡುಬರುತ್ತವೆ. ಈ ನಟ್ಸ್‌ ರೆಸಿಪಿ ಟ್ರೈ ಮಾಡಿ ನಿಮ್ಮ ಮಕ್ಕಳ ತೂಕ ಹೆಚ್ಚಸಲು ಸಹಾಯ ಮಾಡುತ್ತದೆ. ಈ ಒಂದು ಪೌಡರ್‌ನಿಂದ ಬಗೆ ಬಗೆಯ ತಿನಿಸು ಮಾಡಿ ನಿಮ್ಮ ಮಕ್ಕಳ ಆರೋಗ್ಯ ಹೆಚ್ಚಿಸಬಹುದು.

ಬೇಕಾಗುವ ಪದಾರ್ಥಗಳು: 

1 ಕಪ್ ಬಾದಾಮಿ
1/2ಕಪ್ ಗೋಡಂಬಿ
2 ಟೇಬಲ್ಸ್ಪೂನ್ ಪಿಸ್ತಾ
2 ಟೇಬಲ್ಸ್ಪೂನ್ ಕುಂಬಳಕಾಯಿ ಬೀಜಗಳು
3  ಏಲಕ್ಕಿ
1/4 ಟೀಸ್ಪೂನ್ ಕೇಸರಿ

ಮಾಡುವ ವಿಧಾನ: 

ಮೇಲೆ ನೀಡಿರುವ ಎಲ್ಲಾ ಡ್ರೈ ಫ್ರೂಟ್ಸ್‌ಗಳನ್ನು ಸ್ವಲ್ಪ ಗರಿಗರಿಯಾಗುವವರೆಗೂ ಹುರಿದುಕೊಂಡು ನುಣ್ಣಗೆ ಮಿಕ್ಸಿ ಮಾಡಿಕೊಂಡರೆ ನಟ್ಸ್‌ ಪೌಡರ್‌ ಸಿದ್ದವಾಗಿದೆ. ಇದರಿಂದ ಹಾಲು, ದೋಸೆ, ಲಡ್ಡು, ರಾಗಿ ಹಾಲು ತಯಾರಿಸುವುದನ್ನು ನೋಡೋಣ ಬನ್ನಿ

  • ಒಂದು ಲೋಟ ಹಾಲನ್ನು ಬಿಸಿ ಮಾಡಿ, ಅದಕ್ಕೆ ಒಂದು ಸ್ಪೂನ್‌ ನಟ್ಸ್‌ ಪೌಡರ್‌ ಹಾಕಿ ಐದು ನಿಮಿಷ ಕುದಿಸಿ ಮಕ್ಕಳಿಗೆ ನೀಡಿ
  • ದೋಸೆ-ಒಂದು ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್‌ ಮಾಡಿ ಅದಕ್ಕೆ ಅರ್ಧಕಪ್‌ ಗೋಧಿ ಹಿಟ್ಟು ಜೊತೆಗೆ ಒಂದು ಸ್ಪೂನ್‌ ಈ ಪೌಡರ್‌, ಸ್ವಲ್ಪ ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ, ಎಂಚಿನ ಮೇಲೆ ಇದನ್ನು ದೋಸೆಯಂತೆ ಹಾಕಿಕೊಟ್ಟರೆ ಮಕ್ಕಳು ಸವಿಯುತ್ತಾರೆ.
  • ಲಡ್ಡು-ಐದಾರು ಡೇಟ್ಸ್‌ನ ಬೀಜ ತೆಗೆದು ನುಣ್ಣಗೆ ಮಿಕ್ಸಿಯಲ್ಲಿ ಪೇಸ್ಟ್‌ ಮಾಡಿ, ಈ ನಟ್ಸ್‌ ಪುಡಿ ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿ ಕೊಡಿ
  • ರಾಗಿ ಹಾಲು-ಕಾಫಿ ಬಟ್ಟಲಿಗೆ ಒಂದು ಸ್ಪೂನ್‌ ರಾಗಿ ಹಿಟ್ಟು, ಒಂದು ಸ್ಪೂನ್‌ ನಟ್ಸ್‌ ಪೌಡರ್‌ ಹಾಕಿ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಿ ನಿಮ್ಮ ಮಕ್ಕಳಿಗೆ ನೀಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!