ಹೌದು, ಇದು ED ಸರಕಾರನೇ: ಲೇವಡಿ ಮಾಡುವವರಿಗೆ ತಿರುಗೇಟು ನೀಡಿದ ಫಡ್ನವೀಸ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಏಕನಾಥ್ ಶಿಂದೆ-ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮಹಾರಾಷ್ಟ್ರದ ರಾಜಕೀಯಗೊಂದಲ ಅಂತ್ಯವಾಗಿದೆ. 288 ಸದಸ್ಯ ಬಲದಲ್ಲಿ ಮೈತ್ರಿ ಸರ್ಕಾರದ ಪರವಾಗಿ 164 ಶಾಸಕರು ಮತ ಚಲಾವಣೆ ಮಾಡಿದರು.
ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ , 2019ರಲ್ಲಿ ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು. ಆದರೆ ಬಹುಮತದಿಂದ ದೂರವಿಡಲಾಗಿತ್ತು. ಇದೀಗ ಏಕನಾಥ್ ಶಿಂಧೆ ಅವರೊಂದಿಗೆ ನಾವು ಮತ್ತೊಮ್ಮೆ ಶಿವಸೇನೆ ಜೊತೆ ಸರ್ಕಾರ ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ ಎಂದು ಹೇಳಿದರು.
ಇದರ ಬೆನ್ನಲ್ಲೇ ಸದನದಲ್ಲಿ , ಇದು ಇಡಿ ಸರ್ಕಾರ ಎಂದು ಜನರು ಲೇವಡಿ ಮಾಡುತ್ತಿದ್ದು, ಅದಕ್ಕೆ ತಿರುಗೇಟು ನೀಡಿದ ಅವರು, ಹೌದು, ಇದು ಏಕನಾಥ್ ದೇವೇಂದ್ರ ಅವರ ಇಡಿ ಸರ್ಕಾರ ಎಂದು ತಿರುಗೇಟು ನೀಡಿದರು.
ಈ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಎಂದಿಗೂ ಜಗಳ ನಡೆಯುವುದಿಲ್ಲ. ಸಹಕಾರದೊಂದಿಗೆ ಮುಂದುವರೆಯುತ್ತೇವೆ. ನಾನು ಮತ್ತೆ ಬರುತ್ತೇನೆಂದು ಹಿಂದೊಮ್ಮೆ ಹೇಳಿದ್ದೆ. ಆ ವೇಳೆ ಅನೇಕರು ನನ್ನನ್ನು ಅಪಹಾಸ್ಯ ಮಾಡಿದ್ದರು. ಇದೀಗ ಹಿಂತಿರುಗಿ ಬಂದಿದ್ದೇನೆ. ಆದರೆ, ಅಪಹಾಸ್ಯ ಮಾಡಿದವರ ಮೇಲೆ ನಾನು ಸೇಡು ತಿರಿಸಿಕೊಳ್ಳುವುದಿಲ್ಲ. ಅವರನ್ನ ಕ್ಷಮಿಸುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!