June 6, 2026
Saturday, June 6, 2026
spot_img

Oats Coffee | ತೂಕ ಇಳಿಸೋಕೆ ಬೆಸ್ಟ್‌ ಈ ‘ಓಟ್ಸ್ ಕಾಫಿ’! 5 ನಿಮಿಷದಲ್ಲಿ ರೆಡಿ ಆಗುತ್ತೆ ನೋಡಿ

ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಎನರ್ಜಿ ಡ್ರಿಂಕ್ ಆಗಿ ಸೇವಿಸಲು ಓಟ್ಸ್ ಕಾಫಿ ಟ್ರೈ ಮಾಡಿ. ಓಟ್ಸ್‌ನಲ್ಲಿರುವ ಫೈಬರ್ ಮತ್ತು ಕಾಫಿಯ ರಿಫ್ರೆಶಿಂಗ್ ರುಚಿ ಸೇರಿ ಈ ಪಾನೀಯವನ್ನು ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಮಾಡುತ್ತದೆ. ತೂಕ ನಿಯಂತ್ರಣಕ್ಕೆ ಸಹ ಇದು ಸಹಕಾರಿ.

ಬೇಕಾಗುವ ಪದಾರ್ಥಗಳು

ಓಟ್ಸ್ – ಅರ್ಧ ಕಪ್
ಕಾಫಿ ಪುಡಿ – 1 ಸಣ್ಣ ಚಮಚ
ಹಾಲು ಅಥವಾ ಬಾದಾಮಿ ಹಾಲು – 1 ಕಪ್
ಖರ್ಜೂರ – 1 ಅಥವಾ 2 (ನೆನೆಸಿದ್ದು)
ಜೇನುತುಪ್ಪ – 1 ಚಮಚ
ಐಸ್ ಕ್ಯೂಬ್‌ಗಳು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಓಟ್ಸ್ ಅನ್ನು 10 ರಿಂದ 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ನೀರನ್ನು ಬಸಿದು ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ ಕಾಫಿ ಪುಡಿ, ಹಾಲು, ಖರ್ಜೂರ ಹಾಗೂ ಐಸ್ ಕ್ಯೂಬ್‌ಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ಸ್ಮೂಥಿ ಹದಕ್ಕೆ ಬಂದ ನಂತರ ಗ್ಲಾಸ್‌ಗೆ ಸುರಿದು ತಣ್ಣಗೆ ಸವಿಯಿರಿ. ಬೇಕಿದ್ದರೆ ಮೇಲಿಂದ ಸ್ವಲ್ಪ ಕಾಫಿ ಪುಡಿ ಅಥವಾ ಓಟ್ಸ್ ಹಾಕಿ ಅಲಂಕರಿಸಬಹುದು.

ಆರೋಗ್ಯ ಲಾಭಗಳು

ಹೊಟ್ಟೆ ತುಂಬಿದ ಅನುಭವ ನೀಡುತ್ತದೆ
ತೂಕ ಇಳಿಕೆಗೆ ಸಹಕಾರಿ
ದಿನವಿಡೀ ಎನರ್ಜಿ ನೀಡುತ್ತದೆ
ಫೈಬರ್ ಮತ್ತು ಪ್ರೋಟೀನ್ ಸಮೃದ್ಧ ಡ್ರಿಂಕ್

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !