ತಪ್ಪು ಬೆಂಬಲಿಸುವುದು, ಸಹಕರಿಸುವುದು ತಪ್ಪು: ಕಾಂಗ್ರೆಸ್‌ ಪ್ರತಿಭಟನೆ ವಿರುದ್ಧ ಓಬಳೇಶ್ ಆಕ್ರೋಶ

ಹೊಸದಿಗಂತ ವರದಿ, ಬಳ್ಳಾರಿ
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿನ ತಪ್ಪಿನಿಂದ ರಕ್ಷಣೆ ಪಡೆಯಲು ಕೈ ನಾಯಕರು ಜಾರಿ ನಿರ್ದೇಶನಾಲಯ (ಇಡಿ) ವಿರುದ್ಧ ಬಹುದೊಡ್ಡ ಆಂದೋಲನ ರೂಪದಲ್ಲಿ ಹೋರಾಟ ಮಾಡುತ್ತಿರುವುದು ಸರಿಯಲ್ಲ, ತಪ್ಪು ಮಾಡದಿದ್ದರೇ ಕಾನೂನು ಹೋರಾಟ ನಡೆಸಲಿ, ಅದನ್ನು ಬಿಟ್ಟು ದೇಶದಲ್ಲಿ ಹೋರಾಟದ ಕಿಚ್ಚು ಹಚ್ಚುವುದು ಸರಿಯಲ್ಲ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಓಬಳೇಶ್ ಅವರು ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಮಾತನಾಡಿದ ಅವರು, ದೇಶದ ಕಾನೂನು ಉಲ್ಲಂಘಿಸುವುದು, ಅದಕ್ಕೆ ಸಹಕರಿಸುವುದು ತಪ್ಪು, ಇದನ್ನು ಯಾರೇ ಮಾಡಿದರೂ ಅವರು ತನಿಖೆ ಎದುರಿಸಬೇಕಾಗಲಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರಿಗೂ ಒಂದೇ ಕಾನೂನು, ಹೀಗಿರುವಾಗ ನ್ಯಾಶನಲ್ ಹೇರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿದರೇ, ಹೋರಾಟದ ಕಿಚ್ಚು ಹಚ್ಚಿ ಬಹುದೊಡ್ಡ ಪ್ರಕರಣದಿಂದ ರಕ್ಷಣೆ ಪಡೆಯಲು ಕೈ ನಾಯಕರು ಮುಂದಾಗಿರುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ಕೆಲಸ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ, ಪ್ರಕರಣದ ತನಿಖೆ ಕುರಿತು ನೋಟಿಸ್ ನೀಡಿ ವಿಚಾರಣೆಗೆ ಕರೆದರೇ, ನಮ್ಮನ್ನು ಪ್ರಶ್ನಿಸಬೇಡಿ, ವಿಚಾರಣೆಗೆ ಕರಿಯಬೇಡಿ ಅಂದರೇ ಹೇಗೆ ಎಂದು ಪ್ರಶ್ನಿಸಿದರು. ನಮ್ಮಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ, ನಾವೂ ತಿನ್ನೋಲ್ಲ, ತಿನ್ನೋವರಿಗೆ ಅವಕಾಶ ನೀಡೋಲ್ಲ, ಕಂಡು ಬಂದರೆ ಹೆಡಮುರಿ ಕಟ್ಟುವೆ ಎಂದು ಪ್ರಧಾನಿ ಮೋದಿಜೀ ಅವರು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದಾರೆ. ವಿನಾಕಾರಣ ಈ ಬಹುದೊಡ್ಡ ಪ್ರಕರಣವನ್ನು ರಾಜಕೀಯ ಪಿತೂರಿ ಎನ್ನುವುದು ತಪ್ಪು ಎಂದರು. ಕೈ ನಾಯಕರು ಅಕ್ರಮ ಹಗರಣಗಳ ಸರದಾರರು, ಇದನ್ನು ಪ್ರಶ್ನಿಸಬಾರದು ಎಂದರೇ ಹೇಗೆ, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ರಾಹುಲ್ ಗಾಂದಿ ವಿರುದ್ಧ ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಕುರಿತು ಯಾರೂ ತನಿಖೆನೆ ನಡೆಸುವುದು ಬೇಡ ಎನ್ನುವ ಕಾಂಗ್ರೆಸ್ ನ ಚಿಂತನೆ ಎಷ್ಟರ ಮಟ್ಟಿಗೆ ಸರಿ, ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ, ಅವರ ಬಾಯಿ‌ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸಿಗರು ಮಾಡಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!