ದೆಹಲಿಯಲ್ಲಿ ನಿರಂತರ ಮಳೆ: ಚರಂಡಿ ನೀರು ಗದ್ದೆಗೆ ನುಗ್ಗಿ ಅವಾಂತರ ಸೃಷ್ಟಿ, ರೈತರ ಅಳಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರಂತರ ಮಳೆಯಿಂದಾಗಿ ನಜಾಫ್‌ಗಢದ ಕೃಷಿ ಜಮೀನು ಭಾರೀ ಹಾನಿಗೀಡಾಗಿದೆ. ಇಲ್ಲಿನ ಎರಡು ಗ್ರಾಮಗಳ ಹಾಗೂ ಸಮೀಪದ ಚರಂಡಿಯಿಂದ ಮಳೆ ನೀರು ಹೊಲಗಳಿಗೆ ಬರುತ್ತಿದ್ದು, ಬೆಳೆ ನಾಶವಾಗುತ್ತಿದೆ ಎಂದು ಸ್ಥಳೀಯ ರೈತ ದಿನೇಶ್‌ಕುಮಾರ್‌ ಅಳಲು ತೋಡಿಕೊಂಡರು.

ಕಳೆದ ಹಂಗಾಮಿನಂತೆ ಈ ವರ್ಷವೂ ಕೊಯ್ಲಿಗೆ ಮುನ್ನವೇ ಜೋರಾಗಿ ಸುರಿದ ಮಳೆಯು ಸಂಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ ನಜಾಫ್‌ಗಢ ರೈತರು. ದೆಹಲಿಯ ಹಲವಾರು ಪ್ರದೇಶಗಳಲ್ಲಿ ಇದುವರೆಗೆ ಭಾರೀ ಮಳೆ ದಾಖಲಾಗಿದೆ, ಇದು ಭತ್ತದ ಬೆಳೆ ಮೇಲೆ ನೇರವಾಗಿ ಪರಿಣಾಮ ಬೀರಿದೆ.

ಸಫ್ದರ್‌ಜಂಗ್‌ನಲ್ಲಿ ಭಾನುವಾರ ಸಂಜೆಯವರೆಗೆ 81.7 ಮಿಮೀ ಮಳೆಯಾಗಿದ್ದು, ಬೆಳೆ ಮೇಲೆ ಪರಿಣಾಮ ಬೀರಿದೆ. ಅಕಾಲಿಕ ಮಳೆ ಭತ್ತದ ಬೆಳೆಗೆ ಪರಿಣಾಮ ಬೀರಿದರೆ, ತರಕಾರಿ ಬೆಳೆ 10-15 ದಿನಗಳು ಮತ್ತು ಗೋಧಿ ಬಿತ್ತನೆಯನ್ನು ಕನಿಷ್ಠ ಎರಡು ವಾರಗಳವರೆಗೆ ವಿಳಂಬವಾಗಲಿದೆ ಎಂದು ರೈತರು ತಿಳಿಸಿದರು. ದೆಹಲಿಯ ರೈತರು ಆಲೂಗೆಡ್ಡೆ, ಹೂಕೋಸು, ಪಾಲಾಕ್ ಅಥವಾ ಜಾನುವಾರುಗಳಿಗೆ ಮೇವು ಸಿಗುವ ಬೆಳೆ, ತರಕಾರಿಗಳೆಲ್ಲವೂ ಮಳೆ ಅವಾಂತರಕ್ಕೆ ನಾಶವಾಗಿದೆ. ಸಾಲ-ಸೋಲ ಮಾಡಿ ಬದುಕು ಕೊಟ್ಟಿಕೊಳ್ಳೋಣವೆಂದರೆ ಈ ಮಳೆ ನಮ್ಮ ಬದುಕನ್ನು ಮತ್ತಷ್ಟು ನರಕಕ್ಕೆ ತಳ್ಳಿದೆ ಎಂದು ಸ್ಥಳೀಯ ರೈತರು ಕಣ್ಣೀರು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!