ನೇರಪ್ರಸಾರದ ವೇಳೆ ಟಿವಿಗೆ ಕೈಮುಗಿದು ರಾಮನಿಗೆ ನಮಸ್ಕರಿಸಿದ ಒಡಿಶಾ ಸಿಎಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ದೇಶವೇ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ವರ್ಚುವಲ್‌ ಆಗಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು.

ಕುರ್ತಾ ಪೈಜಾಮಾ ಧರಿಸಿದ್ದ ಅವರು ಇಡೀ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಯುವವರೆಗೂ ಶ್ರೀರಾಮನಿಗೆ ಕೈಮುಗಿದುಕೊಂಡೇ ಕುಳಿತಿದ್ದರು. ಅವರ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

2.7 ಎಕರೆ ಭೂಮಿಯಲ್ಲಿ ನಿಂತಿರುವ ರಾಮ ಮಂದಿರುವ ವಾಸ್ತುಶಿಲ್ಪದ ಪರಮ ವೈಭವವಾಗಿದೆ. 161 ಅಡಿ ಎತ್ತರದ ಮಂದಿರ, 235 ಅಡಿ ವ್ಯಾಪಿಸಿದೆ. 360 ಅಡಿ ಉದ್ದವನ್ನು ಹೊಂದಿದೆ. ಪ್ರಾಚೀನ ಭಾರತದ ಎರಡು ದೇವಾಲಯ-ಕಟ್ಟಡ ಶೈಲಿಗಳಲ್ಲಿ ಒಂದಾದ ವಿಶಿಷ್ಟವಾದ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರವು ಎಲ್ಲಾ ವೈದಿಕ ಆಚರಣೆಗಳನ್ನು ಅನುಸರಿಸುತ್ತದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿದೆ. ನಿರ್ಮಿಸಲಾದ ಪ್ರದೇಶವು ಸುಮಾರು 57,000 ಚದರ ಅಡಿಗಳನ್ನು ಒಳಗೊಂಡಿದೆ, ಇದು ಮೂರು-ಅಂತಸ್ತಿನ ರಚನೆಯನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!