ಬೇರೆ ದೇಶಗಳಲ್ಲಿಯೂ ರಾಮನಾಪ ಜಪ, ಏನೆಲ್ಲಾ ಮಾಡಿದ್ದಾರೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ರಾಮಭಕ್ತಿ ಹಬ್ಬಿದೆ. ಅಯೋಧ್ಯೆಯಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ಸಂಪನ್ನಗೊಂಡಿದ್ದು, ಬೇರೆ ದೇಶಗಳಲ್ಲಿ ರಾಮಭಕ್ತರು ಏನೆಲ್ಲಾ ಮಾಡಿದ್ದಾರೆ ನೋಡಿ..

ಮಾರಿಷಸ್‌ನಲ್ಲಿ ರಾಮಭಕ್ತರು ಕೇಸರಿ ಧ್ವಜಗಳನ್ನು ಹಾರಿಸುತ್ತಾ ಕಾರ್ ರ‍್ಯಾಲಿ ನಡೆಸಿದ್ದಾರೆ.

ಫ್ರಾನ್ಸ್‌ನಲ್ಲಿರುವ ಭಾರತೀಯರು ಸಂಭ್ರಮಾಚರಣೆ ಮಾಡಿದ್ದಾರೆ. ತಮ್ಮ ಕಾರ್‌ಗಳಿಗೆ ಪುಟ್ಟ ರಾಮಧ್ವಜ ಕಟ್ಟಿಕೊಂಡು ರಸ್ತೆಗಳಲ್ಲಿ ಒಬ್ಬರ ಹಿಂದೆ ಒಬ್ಬರು ಸಂಚಾರ ನಡೆಸಿದ್ದಾರೆ, ಜೈಶ್ರೀರಾಮ್ ಎಂದು ಘೋಷಣೆ ಮಾಡಿದ್ದಾರೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹಿಂದೂಗಳು ಭಗವಾಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಭಗವಾನ್ ಶ್ರೀರಾಮ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!