ಹೊಸದಿಗಂತ ಡಿಜಿಟಲ್ ಡೆಸ್ಕ್
ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸರ್ಕಾರ 3 ವರ್ಷ ಪೂರೈಸಿದ ಹಿನ್ನೆಲೆ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದು, . ಅನುಭವಿ ಮತ್ತು ಯುವಕರಿಗೆ ಮಣೆ ಹಾಕಿರುವ ಪಟ್ನಾಯಕ್, 5 ಮಹಿಳೆಯರು ಸೇರಿ 21 ಜನರಿಗೆ ಅವಕಾಶ ನೀಡಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
20 ಸಚಿವರು ಶನಿವಾರ ರಾಜೀನಾಮೆ ನೀಡಿದ ನಂತರ ಹೊಸ ಮಂತ್ರಿ ಮಂಡಲವನ್ನು ಇಂದು ರಚಿಸಲಾಗಿದೆ.
ಭುವನೇಶ್ವರದಲ್ಲಿರುವ ಲೋಕಸೇವಾ ಭವನದ ನೂತನ ಕೇಂದ್ರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. 13 ಕ್ಯಾಬಿನೆಟ್ ಮತ್ತು 8 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಸೇರಿದಂತೆ ಒಟ್ಟು 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮೂವರು ಮಹಿಳೆಯರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಕಳೆದ ಸಚಿವ ಸಂಪುಟದಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಸಚಿವರಾಗಿದ್ದರು.