ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಾಸೋರ್‌ನಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಆಂಧ್ರಪ್ರದೇಶದಿಂದ ಹತ್ತು ಆಂಬ್ಯುಲೆನ್ಸ್ ವಾಹನಗಳನ್ನು ಕಳಿಸಲಾಗಿದೆ.
ಗಾಯಾಳುಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಲು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೂಚನೆಗಳನ್ನು ನೀಡಿದ್ದಾರೆ ಶ್ರೀಕಾಕುಲಂ ಜಿಲ್ಲಾ ಮ್ಯಾನೇಜರ್ ಹೇಳಿದ್ದಾರೆ.
“ಗಾಯಾಳುಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸಲು ನಮ್ಮ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ನಮಗೆ ಸೂಚನೆಗಳನ್ನು ನೀಡಿದ್ದಾರೆ, ಆಂಧ್ರಪ್ರದೇಶದಿಂದ ಒಟ್ಟು 10 ಆಂಬ್ಯುಲೆನ್ಸ್ ವಾಹನಗಳು ಇಲ್ಲಿಗೆ ಬಂದಿವೆ” ಎಂದು ನಜೀರ್ ಹೇಳಿದರು.
ಕೆಲವು ಪ್ರಯಾಣಿಕರನ್ನು ಬಾಲಸೋರ್‌ನ ಫಕೀರ್ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಸಚಿವಾಲಯದ ಪ್ರಕಾರ, 1000ಕ್ಕೂ ಹೆಚ್ಚು ಜನ ಕೆಲಸದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳದಲ್ಲಿ 7 ಕ್ಕೂ ಹೆಚ್ಚು ಪೊಕ್ಲೈನ್ ಯಂತ್ರಗಳು, 2 ಅಪಘಾತ ಪರಿಹಾರ ರೈಲುಗಳು ಮತ್ತು 3-4 ರೈಲ್ವೆ ಮತ್ತು ರಸ್ತೆ ಕ್ರೇನ್‌ಗಳನ್ನು ನಿಯೋಜಿಸಲಾಗಿದೆ.
ಒಡಿಶಾದ ಬಾಲಸೋರ್‌ನಲ್ಲೂ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ. ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಆದಿತ್ಯ ಕುಮಾರ್ ಮಾತನಾಡಿ, ಮಗುಚಿ ಬಿದ್ದ ಬೋಗಿಗಳನ್ನು ಹೊರತೆಗೆಯಲಾಗಿದ್ದು, ಒಂದು ಕಡೆಯಿಂದ ಟ್ರ್ಯಾಕ್‌ಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ.