ಒಡಿಶಾ ರೈಲು ದುರಂತ: ಸಂತಾಪ ಸೂಚಿಸಿದ ಕ್ರಿಕೆಟ್​ ತಾರೆಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಕ್ರಿಕೆಟ್​ ತಾರೆಯರು ಕಂಬನಿ ಮಿಡಿದಿದ್ದಾರೆ.

ಬಾಲಸೋರ್​ನಲ್ಲಿ ನಿನ್ನೆ ಸಂಜೆ 7ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಈವರೆಗೆ 261 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏರಿಕೆಯಾಗುತ್ತಿದೆ.

ಘಟನೆಯ ಬಗ್ಗೆ ರಾಜಕೀಯ ಗಣ್ಯರು, ಸಿನಿಮಾ ತಾರೆಯರ ಜೊತೆಗೆ ಕ್ರಿಕೆಟ್​ ದಿಗ್ಗಜರು ಕೂಡ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಟ್ವೀಟ್​ ಮಾಡಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ವಿರಾಟ್​ ಕೊಹ್ಲಿ ಟ್ವೀಟ್​: ಭೀಕರ ರೈಲು ಅಪಘಾತದ ಸುದ್ದಿ ಕೇಳಿ ನನಗೆ ತೀವ್ರ ದುಃಖವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಭಾರತೀಯ ಕ್ರಿಕೆಟಿಗ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

ಗೌತಮ್​ ಗಂಭೀರ್​: ಒಡಿಶಾದಲ್ಲಿ ಅಪಾರ ಪ್ರಾಣಹಾನಿ ಸಂಭವಿಸಿದೆ. ಸಂತ್ರಸ್ತ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ. ಗಾಯಗೊಂಡವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಾಷ್ಟ್ರ ನಿಮ್ಮೊಂದಿಗೆ ನಿಂತಿದೆ” ಎಂದು ಟೀಂ ಇಂಡಿಯಾ ಆಟಗಾರ ಗೌತಮ್​ ಗಂಭೀರ್​ ಟ್ವೀಟ್​ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ವೀರೇಂದ್ರ ಸೆಹ್ವಾಗ್‌ ಸಂತಾಪ: ಒಡಿಶಾದಲ್ಲಿ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು ದುರಂತ ಕೇಳಿದಾಗ ಅತ್ಯಂತ ದುಃಖವಾಯಿತು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಎಲ್ಲ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ ಮತ್ತು ಗಾಯಗೊಂಡವರು ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ” ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಸಂತಾಪ ಸೂಚಿಸಿದ್ದಾರೆ.

ಹರ್ಭಜನ್​​ ಸಿಂಗ್ ಟ್ವೀಟ್​:​ ಒಡಿಶಾದಲ್ಲಿ ಕೋರಮಂಡಲ್​ ಎಕ್ಸ್​ಪ್ರೆಸ್​ ಮತ್ತು ಇನ್ನೊಂದು ಪ್ಯಾಸೆಂಜರ್​ ರೈಲಿನ ನಡುವೆ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ತಿಳಿದು ನೋವಾಗಿದೆ. ನನ್ನ ಪ್ರಾರ್ಥನೆಗಳು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡವರ ಕುಟುಂಬಗಳೊಂದಿಗೆ ಇರುತ್ತವೆ. ಒಡಿಶಾದ ಸರ್ಕಾರ ಆದಷ್ಟು ಬೇಗ ಪ್ರಯಾಣಿಕರನ್ನು ರಕ್ಷಿಸಿ ಎಂದು ಕ್ರಿಕೆಟಿಗ ಹರ್ಭಜನ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!