ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಯ ಹೊಣೆ ಹೊತ್ತುಕೊಂಡಿರುವ ಸಚಿವ ಸಂತೋಷ್ ಲಾಡ್ (Santosh Lad) ಅವರು ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಲುಕಿರುವ ಕರ್ನಾಟಕದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ತೆರಳಿರುವ 32 ವಾಲಿಬಾಲ್ ಆಟಗಾರರು ನಾಳೆ ಬೆಂಗಳೂರಿಗೆ ಬರಲು ಕ್ರೀಡಾಪಟುಗಳಿಗೆ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕಾರ್ಮಿಕ ಇಲಾಖೆಯು, ಕರ್ನಾಟಕದ ಬಾಲಕಿಯರು, ಬಾಲಕರು ಮತ್ತು ತರಬೇತುದಾರರು (ವಾಲಿಬಾಲ್ ಪಂದ್ಯಾವಳಿ) ಹೌರಾ/ ಕೋಲ್ಕತಾಕ್ಕೆ 32 ಮಂದಿ ತೆರಳಿದ್ದರು.ಅವರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಿರ್ದೇಶನದ ಮೇರೆಗೆ ಎಲ್ಲರಿಗೂ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ ಎಂದಿದೆ.
ನಾಳೆ ಕೋಲ್ಕತ್ತಾದಿಂದ ಬೆಂಗಳೂರಿಗೆ ತೆರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಇಂಡಿಗೋ ಏರ್ ಲೈನ್ಸ್ ನಲ್ಲಿ ಟಿಕೆಟ್ ಕಾಯ್ದಿರಿಸಲಾಗಿದೆ. ಈ ವಿಮಾನವು ಸಂಜೆ 4.15ಕ್ಕೆ ಬಿಡಲಿದ್ದು, ಬೆಂಗಳೂರನ್ನು 6.50ಕ್ಕೆ ತಲುಪಲಿದೆ ಎಂದು ಹೇಳಿದೆ.
ರೈಲು ಅಪಘಾತದಿಂದಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಯಾವುದೇ ರೈಲುಗಳಿಲ್ಲ ಮತ್ತು ತರಬೇತುದಾರರ ಕೋರಿಕೆಯ ಮೇರೆಗೆ ಈ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.