ಬಿಹಾರ ಸಂಪುಟದ ಶೇ. 72ರಷ್ಟು ಸಚಿವರ ಮೇಲಿದೆ ಕ್ರಿಮಿನಲ್ ಕೇಸ್!​

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರೆ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿತೀಶ್​ ಕುಮಾರ್ ಬಿಹಾರದಲ್ಲಿ ಹೊಸ ಸರ್ಕಾರ ರಚಿಸಿನಿನ್ನೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 31 ಶಾಸಕರು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇದೀಗ ಈ ಸಂಪುಟದಲ್ಲಿ ಶೇ. 72ರಷ್ಟು ಸಚಿವರ ಮೇಲೆ ಕ್ರಿಮಿನಲ್ ಕೇಸ್​ ಇರುವುದು ಬಹಿರಂಗಗೊಂಡಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಸಮೀಕ್ಷೆಯಿಂದ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಮುಖ್ಯವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಹ ಪ್ರಕರಣ ದಾಖಲಾಗಿರುವುದಾಗಿ ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತಿಳಿಸಿದೆ. ಹಾಲಿ ಕಾನೂನು ಸಚಿವರ ಮೇಲೂ ಕಿಡ್ನಾಪ್ ಕೇಸ್ ಇದೆ.

ಎಡಿಆರ್​​ ಮಾಹಿತಿ ಪ್ರಕಾರ, 23 ಸಚಿವರ ಪೈಕಿ 17 ಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್​ ಆರೋಪಗಳಿವೆ. ಒಟ್ಟು 31 ಸಚಿವರ ಪೈಕಿ 27 ಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಇವರ ಆಸ್ತಿ ಸರಾಸರಿ 5.82 ಕೋಟಿ ರೂಪಾಯಿ ಆಗಿದೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ 8 ಮಂತ್ರಿಗಳ ಶೈಕ್ಷಣಿಕ ಅರ್ಹತೆ 8ರಿಂದ 12ನೇ ತರಗತಿಯ ನಡುವೆ ಇದೆ. ಆದರೆ, ಉಳಿದ ಸಚಿವರು ಪದವೀಧರರು ಅಥವಾ ಅದಕ್ಕಿಂತಲೂ ಹೆಚ್ಚಿನ ಶೈಕ್ಷಣಿಕ ಅರ್ಹತೆ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!