ಲಾಹೋರ್​ನ ಯಾವುದೇ ಪೆಟ್ರೋಲ್ ಪಂಪ್​​​ನಲ್ಲಿ ತೈಲ ಇಲ್ಲ, ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ: ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರಕಿದ್ದು, ಜನಸಾಮಾನ್ಯರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಪಾಕ್​ ಮಾಜಿ ಕ್ರಿಕೆಟರ್​ ಟ್ವೀಟ್ ಮಾಡಿದ್ದಾರೆ.

ಮೂರು ಮಾದರಿ ಕ್ರಿಕೆಟ್​​ನಲ್ಲಿ ಪಾಕ್​ ತಂಡ ಪ್ರತಿನಿಧಿಸಿರುವ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿದ್ದು, ಲಾಹೋರ್​ನ ಯಾವುದೇ ಪೆಟ್ರೋಲ್ ಪಂಪ್​​​ನಲ್ಲಿ ತೈಲ ಇಲ್ಲ, ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

https://twitter.com/MHafeez22/status/1529171895035494400?ref_src=twsrc%5Etfw%7Ctwcamp%5Etweetembed%7Ctwterm%5E1529171895035494400%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Finternational%2Ftop-news%2Fex-pakistan-cricketer-mohammad-hafeez-tweets-on-pakistan-politics%2Fka20220525172505556556492

‘ಲಾಹೋರ್​ನ ಯಾವುದೇ ಪೆಟ್ರೋಲ್ ಬಂಕ್​ನಲ್ಲಿ ಪೆಟ್ರೋಲ್ ಹಾಗೂ ಎಟಿಎಂಗಳಲ್ಲಿ ನಗದು ಲಭ್ಯ ಇಲ್ಲವೇ? ಜನಸಾಮಾನ್ಯರು ರಾಜಕೀಯ ನಿರ್ಧಾರಗಳಿಂದ ಬಳಲುತ್ತಿರುವುದು ಯಾಕೆ? ಎಂದು ತಿಳಿಸಿದ್ದಾರೆ. ಈ ಟ್ವೀಟ್​ ಅನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್​, ಹಾಲಿ ಪ್ರಧಾನಿ ಶೆಹಬಾಜ್​ ಷರೀಫ್​​​ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಇಮ್ರಾನ್ ಖಾನ್​ ಅವರನ್ನ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಶೆಹಬಾಜ್ ಷರೀಫ್ ಕಳೆದ ಏಪ್ರಿಲ್ ತಿಂಗಳಲ್ಲಿ​ ಪಾಕ್​ನ 23ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಪಾಕ್ ತಂಡದ ಪರ ಮೂರು ಮಾದರಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಫೀಜ್​​ 12,000ಕ್ಕೂ ಹೆಚ್ಚು ರನ್​​ಗಳಿಸಿದ್ದು, 250ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಹಫೀಜ್​ 55 ಟೆಸ್ಟ್‌, 218 ಏಕದಿನ ಹಾಗೂ 119 ಟಿ – 20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.2022ರ ಜನವರಿ ತಿಂಗಳಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!