ಹಣದುಬ್ಬರದ ನಿಯಂತ್ರಣಕ್ಕೆ ಗೋಧಿ ಬಳಿಕ ಸಕ್ಕರೆ ರಫ್ತಿನ ಮೇಲೂ ನಿರ್ಬಂಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೋಧಿ ರಫ್ತು ನಿಷೇಧಿಸಿದ್ದ ಸರ್ಕಾರ ಇದೀಗ ಸಕ್ಕರೆ ಸರಬರಾಜಿನ ಮೇಲೂ ನಿರ್ಬಂಧ ಹೇರಿದೆ.
ದೇಶದಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಮಾರುಕಟ್ಟೆಯ ಅವಧಿ ಸೆಪ್ಟೆಂಬರ್‌ಗೆ ಕೊನೆಗೊಳ್ಳುವಂತೆ ವರ್ಷದಲ್ಲಿ 10 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ರಫ್ತು ಮಾಡಬೇಕು. ಇದು ಜೂನ್​ 1 ರಿಂದಲೇ ಜಾರಿಯಾಗಬೇಕು ಎಂಬ ಮಿತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.

ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಯನ್ನು ತಡೆಯಲು ಸಕ್ಕರೆ ರಫ್ತು (ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆ) ಜೂನ್ 1, 2022 ರಿಂದ ನಿರ್ಬಂಧಿತ ವರ್ಗದಲ್ಲಿ ಇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ.

2017-18, 2018-19 and 2019-20 ರಲ್ಲಿ ಕ್ರಮವಾಗಿ 6.2 ಲಕ್ಷ ಮೆಟ್ರಿಕ್​ ಟನ್​, 38 ಎಲ್​ಎಂಟಿ ಮತ್ತು 59.60 ಎಲ್​ಎಂಟಿಯಷ್ಟು ವಿದೇಶಗಳಿಗೆ ರಫ್ತು ಮಾಡಲಾಗಿದೆ.2020- 21 ರಲ್ಲಿ 60 ಎಲ್​ಎಂಟಿ ಗುರಿ ದಾಟಿ 70 ಸುಮಾರು ಸಕ್ಕರೆ ರಫ್ತು ಮಾಡಲಾಗಿದೆ. ಪ್ರಸಕ್ತ 2021-22 ರ ಋತುವಿನಲ್ಲಿ ಸುಮಾರು 90 ಎಲ್​ಎಂಟಿ ಸಕ್ಕರೆ ರಫ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಮಾರು 82 ಲಕ್ಷ ಮೆಟ್ರಿಕ್ ಟನ್​ ಸಕ್ಕರೆಯನ್ನು ರಫ್ತು ಮಾಡಲು ಕಾರ್ಖಾನೆಗಳಿಗೆ ಸೂಚಿಸಲಾಗಿತ್ತು. ಇದರಲ್ಲಿ 78 ಲಕ್ಷ ಮೆಟ್ರಿಕ್​ ಟನ್​ ರಫ್ತು ಮಾಡಲಾಗಿದೆ. ಇದು ಈ ವರ್ಷದ ಮತ್ತು ಸಾರ್ವಕಾಲಿಕವಾಗಿ ಅತ್ಯಧಿಕ ರಫ್ತಿನ ವರ್ಷವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!