ನ. 20ರಂದು ಕರ್ನಾಟಕದಾದ್ಯಂತ ಮದ್ಯದಂಗಡಿಗಳು ಬಂದ್​, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಬಕಾರಿ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ, ಪ್ರಮೋಷನ್​ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ ಎನ್ನಲಾಗುತ್ತಿದೆ.

ಅಧಿಕಾರಿಗಳ ಲಂಚಾವತಾರದಿಂದ‌ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್​ಗೆ ಕರೆ ನೀಡಲಾಗಿದೆ.

ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವೈನ್ ಮರ್ಚೆಂಟ್​ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್​ ಹೆಗ್ಡೆ, ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್​​ಐಎಲ್​ ಹೊರತುಪಡಿಸಿ ಎಲ್ಲಾ ಬಾರ್​ಗಳು ಬಂದ್​ ಎಂದು ​ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!