ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೇನಾ? ಕುದುರೇನಾ? ದನನಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್‍ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ.
ಸಿಎಂ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನಿಮ್ಮ ಆರೋಪ ಆಧಾರ ರಹಿತ ಎಂದು ಹೇಳಿದ್ದಾರೆ.
ಯಾರು, ಯಾವಾಗ, ಯಾರನ್ನ ಖರೀದಿ ಮಾಡಲು ಪ್ರಯತ್ನ ಪಟ್ಟಿದ್ದಾರೆ? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ಆಧಾರ ಸಹಿತವಾಗಿ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿ ಇದ್ದು, ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಾಡೋದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಮಾಡುತ್ತಿರುವ ಆರೋಪ ಎಂದು ಕಿಡಿಕಾರಿದ್ದಾರೆ.