Tuesday, March 28, 2023

Latest Posts

ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್​ ಮಾಡಿದ ಯುವಕರಿಗೆ ಬಿಟ್ಟು 27,500 ರೂ. ದಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಆಲ್ಟೊ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ಪೊಲೀಸರು ಅಪಾಯಕಾರಿ ಸ್ಟಂಟ್​ ಮಾಡುತ್ತಿದ್ದ ಇಬ್ಬರ ಯುವಕರನ್ನು ಪತ್ತೆ ಹೆಚ್ಚಿಸಿ, ಕಠಿಣ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಿಗೆ ಬರೋಬ್ಬರಿ 27,500 ರೂಪಾಯಿಗಳ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಆಲ್ಟೊ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್​ ಮಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಕಾರಿನ ಬಾನೆಟ್ ಮೇಲೆ ಕುಳಿತಿದ್ದು, ಮತ್ತೊಬ್ಬ ಕಾರು ಅತಿವೇಗವಾಗಿ ಚಲಿಸುತ್ತಿರುವುದು ಸೆರೆಯಾಗಿದೆ. ಇಂತಹ ಅಪಾಯಕಾರಿಯಾದ ಚಾಲನೆ ಮತ್ತು ಸ್ಟಂಟ್​ ಮಾಡಿರುವ ವಿಡಿಯೋ ಗ್ರೇಟರ್ ನೋಯ್ಡಾದ ಟ್ರಾಫಿಕ್​ ಪೊಲೀಸರ ಗಮನಕ್ಕೆ ಬಂದಿದ್ದು, ಕಾರಿನ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ನಂತರ ಇದರ ಆಧಾರದ ಮೇಲೆಯೇ ಹೆಚ್ಚಿನ ತನಿಖೆ ಕೈಗೊಂಡು ಈ ಹುಚ್ಚಾಟದ ಸ್ಟಂಟ್​ನಲ್ಲಿ ತೊಡಗಿದ್ದ ವಿಪಿನ್ ಮತ್ತು ನಿಶಾಂತ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಜೊತೆಗೆ ಸ್ಟಂಟ್​ ಮಾಡಲು ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!