ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 15ರಂದು ಕೇರಳದಲ್ಲಿ ಜೆಡಿಎಸ್ ಕಾರ್ಯಕಾರಣಿ ಸಭೆ ನಡೆಯಲಿದ್ದು, ಇದಕ್ಕೆ ಯಾರು ಹಾಜರಾಗದಂತೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Deve Gowda) ರಿಂದ ಪತ್ರ ಬರೆಯಲಾಗಿದೆ.
JDS ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾನು ಕರೆದ ಸಭೆಗೆ ಹಾಜರಾಗಬೇಡಿ. ಕರೆದಿರುವ ಸಭೆ ಅಧಿಕೃತ ಸಭೆ ಅಲ್ಲ, ಯಾರು ಕೂಡ ಹಾಜರಾಗಬಾರದು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಿಗೆ ಪತ್ರ ಬರೆಯಲಾಗಿದೆ.
JDS ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ ನಾನು ಅವರು 15 ನವೆಂಬರ್ ರಂದು ಬೆಳಿಗ್ಗೆ 10 ಗಂಟೆಗೆ ಕೇರಳ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ವಿಲೇಜ್, ವೆಲ್ಲರ್, ತಿರುವನಂತಪುರದಲ್ಲಿ ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಿದ್ದಾರೆ.ಈ ಸಭೆಯೂ ಯಾವುದೇ ಅಧಿಕಾರವಿಲ್ಲದೆ ಮತ್ತು ಜೆಡಿಎಸ್ ಪಕ್ಷದ ಸಂವಿಧಾನದ ಪರಿಚ್ಛೇದದ ಉಲ್ಲಂಘನೆಯಾಗಿದೆ.ಅಂತಹ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮತಿ ಇಲ್ಲ. ಹೀಗಾಗಿ ಇದೊಂದು ಅನಧಿಕೃತ ಸಭೆ ಆಗಿದೆ. ಆದ್ದರಿಂದ, ಸಿ.ಕೆ ನಾನು ಅವರು ಕರೆದಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಾಜರಾಗದಂತೆ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರಿಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಪತ್ರದ ಮೂಲಕ ಸೂಚಿಸಿದ್ದಾರೆ.