May 20, 2026
Wednesday, May 20, 2026
spot_img

Office Fitness | ಡೆಸ್ಕ್ ಜಾಬ್ ಮಾಡೋರು ಫಿಟ್ ಆಗಿರೋದು ಹೇಗೆ?

ಇಂದಿನ ಕೆಲಸದ ವಿಧಾನದಲ್ಲಿ ದಿನಪೂರ್ತಿ ಕುಳಿತುಕೊಳ್ಳೋದು ಸಾಮಾನ್ಯ. ಡೆಸ್ಕ್ ಜಾಬ್ ಮಾಡೋರಿಗೆ ದೇಹ ಚಲನೆ ಕಡಿಮೆ ಆಗುವುದರಿಂದ ತೂಕ ಹೆಚ್ಚುವುದು, ಬೆನ್ನು ನೋವು, ಸ್ಟಿಫ್‌ನೆಸ್ ಸಮಸ್ಯೆಗಳು ಬರುತ್ತವೆ. ಆದರೆ ಸಣ್ಣ ಸಣ್ಣ ಹವ್ಯಾಸಗಳನ್ನು ಸೇರಿಸಿದರೆ ಆಫೀಸ್ ಜೀವನದಲ್ಲೂ ಫಿಟ್ ಆಗಿರಬಹುದು.

ಪ್ರತಿ ಗಂಟೆಗೆ ಚಲನೆ ಅಗತ್ಯ
ಬಹಳ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಪ್ರತಿಯೊಂದು ಗಂಟೆಗೆ 2–3 ನಿಮಿಷ ಎದ್ದು ನಡೆದುಬನ್ನಿ. ಇದರಿಂದ ರಕ್ತ ಸಂಚಾರ ಸುಧಾರಿಸುತ್ತದೆ.

ಸರಿಯಾದ ಕುಳಿತುಕೊಳ್ಳುವ ಪೋಶ್ಚರ್
ಲ್ಯಾಪ್‌ಟಾಪ್ ಮುಂದೆ ಕುಳಿತುಕೊಳ್ಳುವಾಗ ಬೆನ್ನು ನೇರವಾಗಿರಲಿ. ತಪ್ಪಾದ ಪೋಶ್ಚರ್ ಬೆನ್ನು ಮತ್ತು ಕುತ್ತಿಗೆ ನೋವಿಗೆ ಕಾರಣವಾಗುತ್ತದೆ.

ಡೆಸ್ಕ್‌ನಲ್ಲೇ ಸಣ್ಣ ವ್ಯಾಯಾಮಗಳು
ನೆಕ್ ಸ್ಟ್ರೆಚ್, ಶೋಲ್ಡರ್ ರೋಲ್ಸ್, ಕೈ ಕಾಲು ಸ್ಟ್ರೆಚಿಂಗ್ ಇವುಗಳನ್ನು ಡೆಸ್ಕ್‌ನಲ್ಲೇ ಮಾಡಬಹುದು. ಇದರಿಂದ ದೇಹ ರಿಲ್ಯಾಕ್ಸ್ ಆಗುತ್ತದೆ.

ಹೆಲ್ತಿ ಸ್ನ್ಯಾಕ್ಸ್ ಆಯ್ಕೆ ಮಾಡಿ
ಚಿಪ್ಸ್, ಬಿಸ್ಕಟ್ ಬದಲು ಹಣ್ಣು, ನಟ್‌ಗಳು, ಮೊಸರು ಇತ್ಯಾದಿ ಆಯ್ಕೆ ಮಾಡಿದರೆ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ನೀರನ್ನು ಮರಿಬೇಡಿ
ಕಂಪ್ಯೂಟರ್ ಕೆಲಸದಲ್ಲಿ ನೀರು ಕುಡಿಯುವುದನ್ನು ಹಲವರು ಮರೆತುಬಿಡುತ್ತಾರೆ. ಸಾಕಷ್ಟು ನೀರು ಕುಡಿಯುವುದು ದೇಹ ಚುರುಕಾಗಿರಲು ಮುಖ್ಯ.

ಡೆಸ್ಕ್ ಜಾಬ್ ಇದ್ದರೂ ಫಿಟ್ನೆಸ್ ಸಾಧ್ಯ. ಚಲನೆ ಮತ್ತು ಸರಿಯಾದ ಹವ್ಯಾಸವೇ ಮಂತ್ರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !