ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ರಾಜಧಾನಿ ವಾಷಿಂಗ್ಟನ್ಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ.
ಈ ಘಟನೆ ಸೆಪ್ಟಂಬರ್ 18 ರಂದೇ ನಡೆದಿದ್ದು ಅಮೆರಿಕಾದ ತನಿಖಾ ಸಂಸ್ಥೆಗಳು ಈಗ ತನಿಖೆಯನ್ನು ಕೈಗೊಂಡಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ.
ಸಾವಿಗೆ ಕಾರಣವೇನು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ತನಿಖಾ ಸಂಸ್ಥೆಗಳು ಇದು ಆತ್ಮಹತ್ಯೆ ಅಥವಾ ಕೊಲೆಯ ಎಂಬುದನ್ನು ಇನ್ನೂ ಕೂಡ ಸ್ಪಷ್ಟಪಡಿಸಿಲ್ಲ.
ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಇಲಾಖೆ ಒಂದು ಹೇಳಿಕೆಯನ್ನಷ್ಟೇ ನೀಡಿ ಉಳಿದು ಯಾವುದೇ ಅಂಶಗಳನ್ನು ಸ್ಪಷ್ಟಪಡಿಸಿಲ್ಲ. ಈ ರೀತಿಯಾಗಿ ಭಾರತೀಯ ರಾಯಭಾರಿಯ ಸಾವು ಉಂಟಾಗಿದ್ದು ತುಂಬಾ ನೋವು ತಂದಿದೆ. ಸದ್ಯದಲ್ಲಿಯೇ ಮೃತಪಟ್ಟಿರುವ ಭಾರತೀಯ ರಾಯಭಾರಿಯ ಬಗ್ಗೆ ಮಾಹಿತಿಯನ್ನು ಬಹಿರಂಗ ಮಾಡಲಿದ್ದೇವೆ. ಸೆಪ್ಟಂಬರ್ 18 ರಂದು ಅವರು ನಿಧನರಾಗಿದ್ದಾರೆ ಎಂದು ಹೇಳಲು ನಮಗೆ ಅತೀವ ದುಃಖವಾಗುತ್ತಿದೆ ಎಂದಷ್ಟೇ ಹೇಳಿಕೊಂಡಿದ್ದಾರೆ
ರಾಯಭಾರಿ ಕಚೇರಿಯ ಅಧಿಕಾರಿ ಹೆಸರು ರಾಜೇಶ್ ವರ್ಮ ಎಂದು ತಿಳಿದು ಬಂದಿದೆ. ಅವರ ಸಾವು ಅನುಮಾನಾಸ್ಪದ ಸಾವು ಎಂದಷ್ಟೇ ಹೇಳಲಾಗುತ್ತಿದ್ದು. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಯ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದು ವಿಷಯವನ್ನು ತಿಳಿಸಿದೆ ಎಂಬ ಮಾಹಿತಿಯು ಬಂದಿದೆ. ಇನ್ನು ಸಾವಿನ ವಿಷಯ ಬಹಿರಂಗಕ್ಕೆ ವಿಳಂಬ ಮಾಡಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಾಯಭಾರಿ ಕಚೇರಿ ಹೆಚ್ಚಿನ ವಿಚಾರವನ್ನು ಅವರ ಕೌಟುಂಬಿಕ ರಹಸ್ಯ ಕಾಪಾಡುವ ಉದ್ದೇಶದಿಂದ ಬಹಿರಂಗೊಳಿಸಿಲ್ಲ ಎಂದು ಹೇಳಿದೆ.