ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ವಿವಾದವಾದ ಬೆನ್ನಲ್ಲೇ, ರಾಜ್ಯ ಸರಕಾರ ಅಲರ್ಟ್ ಆಗಿದ್ದು, ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರು, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಮಲ್ಲೇಶ್ವರಂ ಟಿಟಿಡಿ ದೇವಸ್ಥಾನದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ
ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಟೆಸ್ಟ್ ಮಾಡಿಸುತ್ತೇನೆ. ನಮ್ಮ ರಾಜ್ಯ 99% ದೇವಾಲಯಗಳು ನಂದಿನಿ ತುಪ್ಪವನ್ನೆ ಬಳಸಿಕೊಳ್ಳುತ್ತಾ ಇದ್ದಾರೆ. ಜನರಿಗೆ ಸಂಶಯ ಬೇಡ ಅಂತಾ ನಂದಿನಿ ತುಪ್ಪ ಬಳಕೆ ಮಾಡಬೇಕು ಅಂತಾ ಆದೇಶ ಮಾಡಿದ್ದೇವೆ. ಕೇಂದ್ರದ ಮಂತ್ರಿ ಒಬ್ಬರು ಪ್ರಸಾದ ಟೆಸ್ಟ್ ಮಾಡಬೇಕು ಅಂತಾ ಹೇಳಿದ್ದಾರೆ. ನನ್ನ ಅಭಿಪ್ರಾಯ ದೇಶದ ಎಲ್ಲಾ ದೇವಸ್ಥಾನಗಳ ಪ್ರಸಾದ ಟೆಸ್ಟ್ ಮಾಡಲಿ ಎಂದಿದ್ದಾರೆ.
ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಎಲ್ಲಿಯೂ ಅಂತಹ ಘಟನೆ ಆಗಿಲ್ಲ. ತಿರುಪತಿ ಲಡ್ಡು ಪ್ರಸಾದದ ಸಂಶಯದ ಬಗ್ಗೆ ತೀರ್ಮಾನ ಆಗೋವರೆಗೂ ಬಳಸಬಾರದು ಅಂತಾ ಚರ್ಚೆ ಆಗ್ತಿರೋ ವಿಷಯ. ನಮ್ಮ ರಾಜ್ಯದ ವಿಚಾರ ಅಲ್ಲ ಇದು ಆಂಧ್ರಪ್ರದೇಶ ವಿಚಾರ ಅಲ್ಲಿನ ಸರ್ಕಾರ ತೀರ್ಮಾನ ಮಾಡಬೇಕು. ಜನ ಬಳಸದೇ ಇದ್ರೆ ಮುಗಿದೇ ಹೋಯ್ತು ಎಂದಿದ್ದಾರೆ.