July 28, 2026
Tuesday, July 28, 2026
spot_img

ತೈಲ ಮಾರುಕಟ್ಟೆಯಲ್ಲಿ ಹಲ್ ಚಲ್: 26 ವರ್ಷಗಳಲ್ಲೇ ಗರಿಷ್ಟ ತೈಲ ಬೆಲೆ ಇಳಿಕೆ ಮಾಡಿದ ಸೌದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಗ್ಗಿ ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆ ಮತ್ತೆ ಸಾಮಾನ್ಯಗೊಂಡ ಬೆನ್ನಲ್ಲೇ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಇದರ ನಡುವೆಯೇ ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರನ್ನು ಸೆಳೆಯಲು ತನ್ನ ಪ್ರಮುಖ ಕಚ್ಚಾತೈಲದ ದರವನ್ನು ಆಗಸ್ಟ್‌ನಿಂದ ಅನ್ವಯವಾಗುವಂತೆ ಭಾರೀ ಪ್ರಮಾಣದಲ್ಲಿ ಇಳಿಸಿದೆ.

26 ವರ್ಷಗಳಲ್ಲೇ ಅತಿದೊಡ್ಡ ದರ ಕಡಿತ

ಸೌದಿ ಅರಾಮ್ಕೊ ತನ್ನ ಅರಬ್ ಲೈಟ್ ಕಚ್ಚಾತೈಲದ ಅಧಿಕೃತ ಮಾರಾಟ ದರವನ್ನು ಪ್ರತಿ ಬ್ಯಾರಲ್‌ಗೆ 11 ಡಾಲರ್‌ ಕಡಿತಗೊಳಿಸಿದೆ. ಇದು ಕಳೆದ 26 ವರ್ಷಗಳಲ್ಲೇ ದಾಖಲಾಗಿರುವ ಅತಿದೊಡ್ಡ ಬೆಲೆ ಇಳಿಕೆ ಎನ್ನಲಾಗಿದೆ. ಜುಲೈ ತಿಂಗಳಲ್ಲಿಯೂ ಕಂಪನಿ 6 ಡಾಲರ್‌ ಕಡಿತ ಮಾಡಿತ್ತು. ಹೊಸ ದರದಂತೆ ಕಚ್ಚಾತೈಲವು ಸುಮಾರು 71.7 ಡಾಲರ್‌ ಪ್ರತಿ ಬ್ಯಾರಲ್‌ಗೆ ಮಾರಾಟವಾಗಲಿದೆ.

ಇದನ್ನೂ ಓದಿ:

ಬೇಡಿಕೆ ಕುಸಿತ, ಪೂರೈಕೆ ಏರಿಕೆ

ಅಮೆರಿಕ-ಇರಾನ್ ಸಂಘರ್ಷದ ತೀವ್ರತೆ ಕಡಿಮೆಯಾಗಿರುವುದು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ಪುನರಾರಂಭವಾದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಸುಧಾರಿಸಿದೆ. ಇದೇ ವೇಳೆ ಏಷ್ಯಾದಲ್ಲಿ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಸೌದಿ ಅರೇಬಿಯಾ ಬೆಲೆ ಇಳಿಕೆ ನಿರ್ಧಾರ ಕೈಗೊಂಡಿದೆ.

ಭಾರತಕ್ಕೂ ಸಿಗಬಹುದೇ ಲಾಭ?

ಭಾರತದ ಪ್ರಮುಖ ಕಚ್ಚಾತೈಲ ಪೂರೈಕೆದಾರ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದೆ. ಹೀಗಾಗಿ ದರ ಇಳಿಕೆಯ ಪರಿಣಾಮ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಗ್ರಾಹಕರಿಗೆ ನೇರ ಲಾಭ ಯಾವಾಗ ಸಿಗಲಿದೆ ಎಂಬುದು ತೈಲ ಕಂಪನಿಗಳ ಮುಂದಿನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !