ಹೊಸದಿಗಂತ ವಿಜಯನಗರ:
ಹಳೇ ದ್ವೇಷದಿಂದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಪತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಹೊಸಪೇಟೆ ಮೂಲದ ಹಾಲಿ ನಿವಾಸಿ ದಾವಣಗೆರೆಯ ಹೊನ್ನೂರಸ್ವಾಮಿ (28) ಮೃತ ವ್ಯಕ್ತಿಯಾಗಿದ್ದು, ಕಾಳಿ ಅಲಿಯಾಸ್ ಕಾಳಿದಾಸ್(30) ಕೊಲೆ ಆರೋಪಿಯಾಗಿದ್ದಾನೆ. ಹೊಸಪೇಟೆಯ ಜಂಬುನಾಥ ಜಾತ್ರೆ ನಿಮಿತ್ತ ಹೊನ್ನೂರಸ್ವಾಮಿ ಆಗಮಿಸಿರುವ ಬಗ್ಗೆ ಮಾಹಿತಿ ತಿಳಿದ ಆರೋಪಿ ಚಾಕುವಿನಿಂದ ಚುಚ್ಚಿ, ನಂತರ ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಎಸ್ಪಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಎಸ್ಪಿ ಮಾರ್ಗದರ್ಶನದಲ್ಲಿ ಆರೋಪಿ ಕಾಳಿದಾಸನನ್ನು ಬಂಧಿಸಲಾಗಿದೆ.