Monday, November 28, 2022

Latest Posts

ಓಲ್ಡ್‌ ಮಂಕ್‌ನಲ್ಲಿ ತಯಾರಾಗ್ತಿದೆ ಗರಂ ಗರಂ ಚಾಯ್: ಮಣ್ಣಿನ ಕಪ್‌ಗಳಲ್ಲಿ ಎಂಜಾಯ್‌ ಮಾಡ್ತಿದಾರೆ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಲಾಕ್ ಚಾಯ್, ಗ್ರೀನ್ ಚಾಯ್, ಜಿಂಜರ್ ಚಾಯ್, ಇರಾನಿ ಚಾಯ್ ಹೀಗೆ ಚಾಯ್ ನಲ್ಲಿ ಹಲವು ವಿಧಗಳಿವೆ. ಚಾಯ್ ನಲ್ಲಿ ಎಷ್ಟೇ ವೆರೈಟಿಗಳಿದ್ದರೂ ಹೊಸ ಹೊಸ ರುಚಿಗಳು ಹುಟ್ಟಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಗೋವಾ ಬೀಚ್‌ನಲ್ಲಿ ಹೊಸ ಬಗೆಯ ಚಾಯ್‌ ರುಚಿಗೆ ಚಾಯ್ ಪ್ರೇಮಿಗಳು ಫಿದಾ ಆಗುತ್ತಿದ್ದಾರೆ. ಟೀ ಪ್ರಿಯರಷ್ಟೇ ಅಲ್ಲ, ಮದ್ಯ ಪ್ರಿಯರೂ ಫಿದಾ ಆಗುತ್ತಿದ್ದಾರೆ. ಮದ್ಯ ಮತ್ತು ಚಹಾದ ನಡುವಿನ ಸಂಬಂಧವೇನು ಅಂತೀರಾ? ಅದೇ ಮತ್ತು ಈ ಚಾಯ್ ಸ್ಪೆಷಾಲಿಟಿ..ಗೋವಾ ಎಂದಾಕ್ಷಣ ನೆನಪಾಗುವುದು ಸುಂದರ ಬೀಚ್ ಗಳು, ಮದ್ಯ ಈಗ ಫ್ರೆಶ್ ಚಾಯ್ ಕೂಡ ಗೋವಾ ಪ್ರಿಯರನ್ನು ಆಕರ್ಷಿಸುತ್ತಿದೆ. ಅದು ‘ಓಲ್ಡ್ ಬ್ಯಾಂಕ್ ರಮ್ ಚಾಯ್’..!!

ಓಲ್ಡ್‌ ಮಂಕ್ ರಮ್‌ನ ಗರಂ ಗರಂ ಚಾಯ್ ತೇಗಾ ಗೋವಾ ಬೀಚ್‌ನಲ್ಲಿ ಫೇಮಸ್ ಆಗಿದೆ. ಈ ಚಾಯ್‌ನ ಹೆಸರು ಮಾತ್ರ ವಿಶಿಷ್ಟವಲ್ಲ ಅದರ ತಯಾರಿಕೆಯೂ ಹಾಗಿದೆ. ಮೊದಲು ಚಾಯ್ ತಯಾರಿಸುವ ಪಾತ್ರೆಯಲ್ಲಿ ಬೆಲ್ಲದ ಪುಡಿ ಹಾಕಿ ಬೆಂಕಿಯ ಮೇಲಿರಿಸಿ, ನಂತರ ಸ್ವಲ್ಪ ಓಲ್ಡ್‌ ಮಂಕ್ ರಮ್ ಸೇರಿಸಿ ಬಿಸಿ ಬಿಸಿಯಾದ ಚಹಾವನ್ನು ಮಣ್ಣಿನ ಕಪ್‌ಗಳಲ್ಲಿ ಹಾಕಿ ಸರ್ವ್‌ ಮಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಪ್ರವಾಸಿಗರು ಹೆಚ್ಚಾಗಿ ಬರುವ ಬೀಚ್ ನಲ್ಲಿ ಈ ಸ್ಟಾಲ್ ಹಾಕಿದ್ದಾರೆ. ಹೀಗಾಗಿ ಈ ಬೀಚ್ ಗೆ ಬಂದವರು ಈ ತರಹದ ಚಾಯ್ ಟೇಸ್ಟ್‌ ನೋಡಿಯೇ ಹೋಗುತ್ತಿದ್ದಾರೆ. ಟೀ ಮಾಡುವ ವಿಡಿಯೋವನ್ನು ಬಳಕೆದಾರರೊಬ್ಬರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!