ಕಳಪೆ ಗ್ರಾಫಿಕ್ಸ್, ಮತ್ತೆ ಮುಂದಕ್ಕೆ ಹೋಯ್ತು ಆದಿಪುರುಷ್ ರಿಲೀಸ್ ಡೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ರಿಲೀಸ್ ಡೇಟ್ ಮತ್ತೆ ಮುಂದೂಡಲಾಗಿದೆ. ಕನವರಿಯಲ್ಲಿ ಸಿನಿಮಾ ರಿಲೀಸ್ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಆ ದಿನಾಂಕ ಕೂಡ ಮುಂದೂಡಲಾಗಿದೆ.

ತನ್ನ ನೆಚ್ಚಿನ ನಟನನ್ನು ರಾಮನ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ ಮತ್ತೆ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಇದಕ್ಕೆ ಕಾರಣ ಗ್ರಾಫಿಕ್ಸ್ ಎನ್ನಲಾಗಿದೆ.

ಅಕ್ಟೋಬರ್ 2 ರಂದು ಆದಿಪುರುಷ್ ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ಆದರೆ ನಿರೀಕ್ಷೆಯಂತೆ ಸಿನಿಮಾ ಟೀಸರ್ ಹಿಟ್ ಆಗಿಲ್ಲ. ಟೀಸರ್‌ನ ಗ್ರಾಫಿಕ್ಸ್ ಕಳಪೆಯಾಗಿದೆ ಎಂದು ಟ್ರೋಲ್ ಮಾಡಿದರು. ಹೀಗಾಗಿ ಚಿತ್ರತಂಡ ದೃಢ ನಿರ್ಧಾರ ತೆಗೆದುಕೊಂಡಿದ್ದು, ಗ್ರಾಫಿಕ್ಸ್ ಉತ್ತಮವಾಗಿಸುವ ಪ್ರಯತ್ನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!