Sunday, June 4, 2023

Latest Posts

ಒಮಿಕ್ರಾನ್​​ ಆತಂಕ: ಬಹುನಿರೀಕ್ಷಿತ ‘RRR​’ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲೆಡೆ ಕೊರೋನಾ ಜೊತೆಗೆ ಒಮಿಕ್ರಾನ್​​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಅನೇಕ ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡುತ್ತಿದೆ.
ಈಗಾಗಲೇ ಶಾಹಿದ್​ ಕಪೂರ್​ ಅಭಿನಯದ ‘ಜೆರ್ಸಿ’ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗಿದ್ದು, ಇದೀಗ ‘ಆರ್​ಆರ್​ಆರ್​’ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ ಆಗಿದೆ.
ದೇಶದ ಪ್ರಮುಖ ಸ್ಥಳಗಲ್ಲಿಅದ್ಧೂರಿಯಾಗಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದ ಚಿತ್ರತಂಡ 2022ರ ಜನವರಿ 7ರಂದು ತೆಲುಗು, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಸಜ್ಜಾಗಿತ್ತು. ಜೊತೆಗೆ ಎಲ್ಲೆಡೆ ಭರಪೂರ ಪ್ರಚಾರವನ್ನು ಮಾಡಿತ್ತು. ಆದರೆ, ಇದೀಗ ದಿಢೀರ್ ಆಗಿ ಮುಂದೂಡಿಕೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ ಚಿತ್ರ ತಂಡ, ಬಹುನಿರೀಕ್ಷಿತ ಚಿತ್ರ RRR ಮಂದೂಡಿಕೆ ಮಾಡಲಾಗಿದ್ದು, ಎಲ್ಲರ ಅರೋಗ್ಯ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರ ಪ್ರೀತಿಗೆ ನಮ್ಮ ಧನ್ಯವಾದಗಳು ಎಂದು ತಿಳಿಸಿದೆ.
ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್ ಆರ್​ಆರ್​ಆರ್ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಅಲಿಯಾ ಭಟ್ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!