ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊರೋನಾ ಜೊತೆಗೆ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಸರ್ಕಾರವು ನಾಳೆಯಿಂದ (ಸೋಮವಾರ) ಶಾಲೆ, ಕಾಲೇಜು, ಸಿನಿಮಾ ಮಂದಿರ, ಮನರಂಜನಾ ತಾಣ, ಸಲೂನ್, ಸ್ಪಾಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿದ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಚ್.ಕೆ.ದ್ವಿವೇದಿ , ಒಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ನಾಳೆಯಿಂದ ಶಾಲಾ, ಕಾಲೇಜು, ಥಿಯೇಟರ್ ಹಾಗೂ ಸಲೂನ್, ಸ್ಪಾಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು ಶೇ. 50 ರಷ್ಟು ಪ್ರಮಾಣದಲ್ಲಿ ನೌಕರರೊಂದಿಗೆ ಕಾರ್ಯನಿರ್ವಹಿಸಲಿವೆ.ಈ ಮೂಲಕ ಪಶ್ಚಿಮ ಬಂಗಾಳ ಭಾಗಶಃ ಲಾಕ್‌ಡೌನ್ ಹಂತಕ್ಕೆ ತಲುಪಿದೆ.