ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರದಲ್ಲಿ ಒಮಿಕ್ರಾನ್‌ನ ಉಪತಳಿ ಬಿಎ.2 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇತ್ತೀಚೆಗೆ ಸಿಂಗಾಪುರದಲ್ಲಿ ವರದಿಯಾಗಿರುವ 198 ಕೋವಿಡ್ ಪ್ರಕರಣಗಳಲ್ಲಿ ರೂಪಾಂತರಿ ತಳಿ ಒಮಿಕ್ರಾನ್‌ನ ಉಪತಳಿ ಬಿಎ.2 ಸೋಂಕಿನ ಪ್ರಕರಣ ಪತ್ತೆಯಾಗಿದೆ. ಬಿಎ.1ಗೆ ಹೋಲಿಸಿದರೆ, ಬಿಎ.2 ಉಪತಳಿ ವೇಗವಾಗಿ ಹರಡುತ್ತದೆ.
ಸಿಂಗಾಪುರದಲ್ಲಿ ನಿತ್ಯವೂ ಬಿಎ.2 ಪ್ರಕರಣಗಳು ವರದಿಯಾಗುತ್ತಿವೆ. ವರದಿಯಾದ 198 ಪ್ರಕರಣದಲ್ಲಿ 150 ಪ್ರಕರಣಗಳಿ ಬಿಎ.2 ಸೋಂಕಿನದ್ದಾಗಿದೆ.
ಹೆಚ್ಚಾಗಿ ವಿದೇಶಗಳಿಂದ ಬಂದವರದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಬಿಎ.2 ಸೋಂಕಿನ ಬಗ್ಗೆ ಅಧ್ಯಯನ ಅವಶ್ಯವಿದೆ. ಸೋಂಕಿನ ತೀವ್ರತೆ ಹಾಗೂ ರೋಗನಿರೋಧಕ ಶಕ್ತಿಯಿಂದ ಪಾರಾಗಬಲ್ಲ ಸಾಮರ್ಥ್ಯದ ಬಗ್ಗೆ ತಿಳಿಯಲು ಸ್ವತಂತ್ರ ಅಧ್ಯಯನ ಅಗತ್ಯವಾಗಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.