Saturday, September 23, 2023

Latest Posts

ಅಂಡರ್-19 ವಿಶ್ವಕಪ್: ಸೆಮೀಸ್‌ಗೆ ಲಗ್ಗೆ ಇಟ್ಟ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್‌ನಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಸೆಮೀಸ್ ತಲುಪಿದೆ. ಭಾರತದ ವಿಜಯಯಾತ್ರೆ ಮುಂದುವರಿದಿದ್ದು, ನಿನ್ನೆ ನಡೆದ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಭಾರತ ಬೌಲಿಂಗ್ ಆರಿಸಿತ್ತು. ಭಾರತದ ಬೌಲರ್‌ಗಳು ಬಾಂಗ್ಲಾ ಬ್ಯಾಟರ್‌ಗಳ ಬೆವರಿಳಿಸಿದ್ದು, ಹೆಚ್ಚು ಹೊತ್ತು ಯಾರೂ ಫೀಲ್ಡ್‌ನಲ್ಲಿ ಇರಲೇ ಇಲ್ಲ. ಎರಡನೇ ಓವರ್‌ನಲ್ಲೇ ರವಿಕುಮಾರ್ ಬಾಂಗ್ಲಾ ವಿಕೆಟ್ ಕಬಳಿಸಿದ್ದು, ಅದಾದ ನಂತರ ಬಾಂಗ್ಲಾ ಚೇತರಿಕೆ ಕಾಣಲಿಲ್ಲ. ಕೇವಲ 111 ರನ್‌ಗೆ ಬಾಂಗ್ಲಾ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯ್ತು.

ಟೀಂ ಇಂಡಿಯಾ ಕೂಡ ಉತ್ತಮ ಓಪನಿಂಗ್ ಪಡೆಯಲಿಲ್ಲ. ಹರ್ನೂರ್ ಸಿಂಗ್ ಶೂನ್ಯಕ್ಕೆ ಔಟ್ ಆದರು. ಭಾರತ ತಂಡದ ಕ್ಯಾಪ್ಟನ್ ಯಶ್ ಧುಲ್ ಗಮನಾರ್ಹ ಆಟ ಆಡಿದ್ದು, ತಂಡ ಗೆಲುವು ಸಾಧಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!