ಹೊಸದಿಗಂತ ವರದಿ,ಮೈಸೂರು:
ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಚೊಚ್ಚಲ ಆಯವ್ಯಯ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, 2 ವರ್ಷಗಳ ಕಾಲದ ಕೋವಿಡ್‌ನ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡಾ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿರುವುದು ಸಾಧನೆಯಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಮನೆ ಬಾಗಿಲಿಗೆ ಸರ್ಕಾರ, ಸರ್ಕಾರದ ಸೇವೆಗಳು ಇದಕ್ಕೆ ಆದ್ಯತೆ ನೀಡಲಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಪಂಚ ಸೂತ್ರಗಳನ್ನು ಸೂಚಿಸಲಾಗಿದೆ.
ಎಲ್ಲರನ್ನೂ ಒಳಗೊಂಡAತೆ ಸಮಗ್ರ ಆರ್ಥಿಕತೆ ಮತ್ತು ಅಭಿವೃದ್ಧಿ, ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆ, ರಾಜ್ಯದಲ್ಲಿ ಹಿಂದುಳಿದಿರುವ ಪ್ರದೇಶಗಳ ಆದ್ಯತೆ, ಕೃಷಿ ಕೈಗಾರಿಕೆ ಮತ್ತು ಸೇವೆಗಳಿಗೆ ಸಿಂಹ ಪಾಲು , ಹೊಸ ಚಿಂತನೆ ಮತ್ತು ಹೊಸ ಚೈತನ್ಯ ಮತ್ತು ಹೊಸ ಮುನ್ನೋಟದೊಂದಿಗೆ ನವ ಕರ್ನಾಟಕಕ್ಕಾಗಿ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.