ಮದುವೆಯಾಗಲು ನಿರಾಕರಿಸಿದ ಗರ್ಲ್‌ಫ್ರೆಂಡ್‌ ಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
24 ವರ್ಷದ ಯುವಕನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ 19 ವರ್ಷದ ಗರ್ಲ್‌ ಫ್ರೆಂಡ್‌ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಕೈ ಕೈ ಹಿಡಿದು ಸಾಗುತ್ತಿದ್ದ ಪ್ರೇಮಿಗಳಲ್ಲಿ ಮದುವೆ ವಿಚಾರವಾಗಿ ಜಗಳವಾಗಿದೆ. ಆಗ ಯುವಕ ಇದ್ದಕ್ಕಿದ್ದಂತೆ ಅವಳಿಗೆ ಕಪಾಳಮೋಕ್ಷ ಮಾಡಿ, ಅವಳ ಕೂದಲನ್ನು ಹಿಡಿದು, ನೆಲಕ್ಕೆ ಬೀಳಿಸಿ ಥಳಿಸಿದ್ದಾನೆ. ನಂತರ ನಿರ್ದಯವಾಗಿ ಅವಳ ಮುಖದ ಮೇಲೆ ಹಾಗೂ ದೇಹದ ಮೇಲೆ ಒದ್ದಿದ್ದಾಳೆ. ಆತನ ಆಮಾನುಷ ದಾಳಿಯಿಂದ ಅಸ್ವಸ್ಥಳಾದ ಯುವತಿ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ರೇವಾದ ಮೌಗಂಜ್ ಪ್ರದೇಶದಲ್ಲಿ ಬುಧವಾರ ಘಟನೆ ನಡೆದಿದೆ. ಪೊಲೀಸರು ಇಬ್ಬರ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದರೆ, ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಾಗ ಯುವಕ ಕೋಪಗೊಂಡಿದ್ದಾನೆ. ಆಕೆಯ ಕುಟುಂಬವು ಒಪ್ಪದಿದ್ದರಿಂದ ಆಕೆ ಮದುವೆಗೆ ಒಪ್ಪಿರಲಿಲ್ಲ. ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!