ಡಿ.12ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ರಾಜ್ಯ ಮಟ್ಟದ ವಾಲಗತ್ತಾಟ್ ನಮ್ಮೆ

ಹೊಸದಿಗಂತ ವರದಿ ಮಡಿಕೇರಿ:

ವೀರಾಜಪೇಟೆಯ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ವರ್ಷದ ರಾಜ್ಯ ಮಟ್ಟದ ಕೊಡವ ವಾಲಗತ್ತಾಟ್ ನಮ್ಮೆಯನ್ನು ಅಮ್ಮತ್ತಿ ಕೊಡವ ಸಮಾಜದಲ್ಲಿ ಡಿ.12ರಂದು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಎರಡನೇ ವರ್ಷದ ಕೊಡವ ವಾಲತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧಿಗಳು ಡಿ. 2ರೊಳಗೆ ತಮ್ಮ ಹೆಸರನ್ನು ವೀರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಕೊಡವ ವಾರ ಪತ್ರಿಕೆಯ ಕಛೇರಿಯಲ್ಲಿ ಅಥವಾ ಫೋನ್ ಮೂಲಕ ನೋಂದಾಯಿಸಬಹುದೆಂದು ಅವರು ಹೇಳಿದ್ದಾರೆ.

ಒಂದರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಹೈಸ್ಕೂಲ್ ವಿಭಾಗ, ಒಂದನೇ ಪಿಯುಸಿಯಿಂದ 3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಹೀಗೆ ಐದು ವಿಭಾಗಗಳಲ್ಲಿ ಪುರುಷರು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಧೋಶ್ ಪೂವಯ್ಯ ವಿವರಿಸಿದ್ದಾರೆ.

ಕಳೆದ ವರ್ಷ ಮೊದಲ ಬಾರಿಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಯಶಸ್ವಿ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು, ಜನಮನ್ನಣೆ ಪಡೆದಿತ್ತು. ಈ ಬಾರಿ ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಣಿಗಾಗಿ 9480556667 ಅಥವಾ 9483815478 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!