Monday, July 4, 2022

Latest Posts

ಮೇ 2ರಂದು ‘ರಂಜಾನ್ ಆಚರಣೆ’: ರಾಜ್ಯ ಸರ್ಕಾರದಿಂದ ‘ಸಾರ್ವತ್ರಿಕ ರಜೆ’ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದಿಂದ ರಂಜಾನ್ ರಜೆಯನ್ನು ಮೇ 3 ರಂದು ನಿಗದಿ ಪಡಿಸಿ ಘೋಷಣೆ ಮಾಡಿತ್ತು. ಆದ್ರೇ.. ಮೂನ್ ಕಮಿಟಿ ತೀರ್ಮಾನದಿಂದ ಮೇ 2ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮೇ 3ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು.
ಆದ್ರೇ.. ಖುತುಬ್ ಎ ರಂಜಾನ್ ಹಬ್ಬವನ್ನು ಮೇ 2-05-2022ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, 2ರಂದು ಸಾರ್ವತ್ರಿಕ ರಜೆ ಮಂಜೂರು ಮಾಡಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss