ಮದುವೆಯ ದಿನವೇ ವಧು ಕೈ ಮುರೀತು, ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಮನೆ ಹೇಗಿರಬೇಕು, ಬ್ಯಾಂಡ್ ಭಾಜಾ, ಬಣ್ಣಬಣ್ಣದ ಹೂಗಳು, ಮನೆ ತುಂಬಾ ಜನ, ಗಜಿಬಿಜಿ, ಮಕ್ಕಳ ಓಡಾಟ.. ಇದೆಲ್ಲಾ ಇದ್ರೇನೇ ಮದುವೆ.

ಆದರೆ ಇಲ್ಲೊಂದು ಮದುವೆ ನಡೆದಿದೆ, ಕಲ್ಯಾಣಮಂಟಪದಲ್ಲಿ ಅಲ್ಲ, ಆಸ್ಪತ್ರೆಯಲ್ಲಿ. ಮದುವೆಗೆ ಇನ್ನೇನು ಕೆಲವೇ ದಿನಗಳಿರುವಾಗ ವಧು-ವರರನ್ನು ಎಲ್ಲಿಗೂ ಕಳಿಸೋದಿಲ್ಲ, ಹುಷಾರಾಗಿ ಮನೆಯಲ್ಲಿಯೇ ಇರಿ ಎನ್ನುತ್ತಾರೆ.

ರಾಜಸ್ಥಾನದ ಚಿತ್ತೋರ್‌ಘರ್‌ನ ರಾವತ್‌ಭಟ ನಿವಾಸಿ ವಧು ಮಧು ಮದುವೆ ದಿನವೇ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾಳೆ. ಮದುವೆಯ ಮಹೂರ್ತ, ದಿನದ ಬಗ್ಗೆ ಆಲೋಚಿಸಿ ಪಂಕಜ್ ಆಸ್ಪತ್ರೆಯಲ್ಲಿಯೇ ಮದುವೆಯಾಗೋಣ ಎಂದಿದ್ದಾರೆ.

ದೊಡ್ಡವರು ಇದಕ್ಕೆ ಹೂಂ ಗುಟ್ಟಿದ್ದು, ಆಸ್ಪತ್ರೆಯಲ್ಲೇ ಹಿರಿಯರ ಸಮ್ಮುಖದಲ್ಲಿ ರೀತಿ ರಿವಾಜುಗಳ ನಡುವೆ ವಿಭಿನ್ನ ಮದುವೆ ನೆರವೇರಿದೆ. ಮದುವೆ ಎಲ್ಲಾದರೇನು ಜೀವನ ಪೂರ್ತಿ ಚೆನ್ನಾಗಿರೋದು ಮುಖ್ಯ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!