ರೇವಣ್ಣ ಜೈಲುವಾಸದ ಮೊದಲ ದಿನ, ತಡರಾತ್ರಿವರೆಗೂ ನಿದ್ದೆ ಇಲ್ಲದಿದ್ರೂ ಬೆಳಗೆದ್ದು ವಾಕಿಂಗ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿಡ್ನ್ಯಾಪ್‌ ಕೇಸ್‌ನಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಸೆಲ್‌ನಲ್ಲಿ ರೇವಣ್ಣ ಮೊದಲ ದಿನ ಕಳೆದಿದ್ದಾರೆ.

ಜೈಲಿನ ಒಳಗೆ ಹೋದ ರೇವಣ್ಣಗೆ ಮೊದಲು ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು. ವಿಚಾರಣಾಧೀನ ಕೈದಿ ನಂಬರ್ 4567 ನಂಬರ್ ನೀಡಿ ವಿಐಪಿ ಸೆಲ್‌ನಲ್ಲಿ ಇರಿಸಲಾಯಿತು. ಓರ್ವ ಭದ್ರತಾ ಸಿಬ್ಬಂದಿ ಜೊತೆ ಇರಿಸಲಾಗಿದ್ದು, ಮುದ್ದೆ ಊಟ ನೀಡಲಾಗಿದೆ.

ತಡರಾತ್ರಿವರೆಗೂ ಎಚ್ಚರವಾಗಿದ್ದ ರೇವಣ್ಣ ಆಲೋಚನೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ. ನಂತರ ಮಲಗೆದ್ದು ಬೆಳಗ್ಗೆ ಜೈಲಿನಲ್ಲೇ ವಾಕಿಂಗ್‌ ಮಾಡಿದ್ದಾರೆ. ನಂತರ ಪೇಪರ್‌ ಓದಿ ತಿಂಡಿ ತಿಂದಿದ್ದಾರೆ ಎಂದು ಹೇಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!